ದೇಶಪ್ರಮುಖ ಸುದ್ದಿ

ದೆಹಲಿ ಮಹಾನಗರ ಪಾಲಿಕೆಗಳ ಫಲಿತಾಂಶ ಇಂದು : ಮುನ್ನಡೆ ಕಾಯ್ದುಕೊಂಡ ಬಿಜೆಪಿ

ನವದೆಹಲಿ : ದೆಹಲಿ ಮಹಾನಗರ ಪಾಲಿಕೆಗಳಿಗೆ ನಡೆದಿದ್ದ ಚುನಾವಣೆಯ ಮತೆ ಎಣಿಕೆ ಕಾರ್ಯ ಇಂದು ನಡೆಯುತ್ತಿದ್ದು, ಇತರ ಪಕ್ಷಗಳಿಗಿಂತ ಬಿಜೆಪಿ ಮುನ್ನಡೆ ಸಾಧಿಸಿದೆ.

ದೆಹಲಿಯ ಮೂರು ಮಹಾನಗರ ಪಾಲಿಕೆಗಳ 272 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ ಇಂದಿನ ಫಲಿತಾಂಶ ಪ್ರತಿಷ್ಠೆಯ ವಿಷಯವಾಗಿರುವ ಕಾರಣ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.

ದೆಹಲಿಯ ಒಟ್ಟು 35 ಕೇಂದ್ರಗಳಲ್ಲಿ ಮತಎಣಿಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಉತ್ತರ ದೆಹಲಿಯಲ್ಲಿ 16, ದಕ್ಷಿಣ ದೆಹಲಿಯಲ್ಲಿ 13 ಹಾಗೂ ಪೂರ್ವ ದೆಹಲಿಯ 6 ಕೇಂದ್ರಗಳಲ್ಲಿ ಮತಎಣಿಕೆ ನಡೆಸಲಾಗುತ್ತಿದೆ. ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶದ ಹಿನ್ನಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಅರೆಸೇನಾ ಪಡೆ, ಗೃಹ ರಕ್ಷಕ ದಳ ಸೇರಿದಂತೆ 90,000 ಸಾವಿರ ಭದ್ರತಾ ಸಿಬ್ಬಂದಿ ಕರ್ತವ್ಯ ನಿರತರಾಗಿದ್ದಾರೆ.

ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸೋತರೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ 34 ಆಪ್ ಶಾಸಕರು ಬಂಡಾಯವೇಳಲಿದ್ದಾರೆಂದು ದೆಹಲಿ ಬಿಜೆಪಿ ವಕ್ತಾರ ತೇಜಿಂದರ್ ಪಾಲ್ ಬಗ್ಗಾ ಹೇಳಿರುವುದು ರಾಜಕೀಯ ವೈಮನಸ್ಸು ಹೆಚ್ಚಿಸಿದೆ. ಇದೆಲ್ಲಾ ಪಕ್ಷ ಒಡೆಯುವ ತಂತ್ರ ಎಂದು ಆಪ್ ನಾಯಕಿ ಅಲ್ಕಾ ಲಂಬಾ ತಿರುಗೇಟು ನೀಡಿದ್ದಾರೆ.

(ಎನ್.ಬಿ.ಎನ್)

Leave a Reply

comments

Related Articles

error: