ಮೈಸೂರು

ಮುಡಾ ಆಯುಕ್ತರಾಗಿ ಎಂ.ಶಿವಕುಮಾರ್ ನೇಮಕ : ಡಾ.ಡಿ.ಬಿ.ನಟೇಶ್ ಪಶುಪಾಲನಾ ಇಲಾಖಾ ಜಂಟಿ ನಿರ್ದೇಶಕರಾಗಿ ವರ್ಗಾವಣೆ

ಮೈಸೂರು,ಜೂ.19:- ಕೆ.ಎ.ಎಸ್ (ಆಯ್ಕೆ ಶ್ರೇಣಿ/ಹಿರಿಯ ಶ್ರೇಣಿ/ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ   ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ  ರಾಜ್ಯ ಸರಕಾರ ಆದೇಶಿಸಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಡಿ.ಬಿ.ನಟೇಶ್ ಅವರನ್ನು ಪಶುಪಾಲನ ಇಲಾಖೆ ಜಂಟಿ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ. ಈ ಸ್ಥಳದಲ್ಲಿದ್ದ ಶೀಲವಂತ ಎಂ.ಶಿವಕುಮಾರ್ ಅವರನ್ನು ಮುಡಾ ಆಯುಕ್ತರನ್ನಾಗಿ ನೇಮಿಸಲಾಗಿದೆ.

ಇದೇ ರೀತಿ ಕೆಎಎಸ್ ಅಧಿಕಾರಿಗಳಾದ ಎಸ್.ರಂಗಪ್ಪ, ಡಾ.ವಾಸಂತಿ ಅಮರ್, ಶ್ರೀರೂಪ, ಪಾತರಾಜು ವಿ, ಅವರನ್ನು ವರ್ಗಾಯಿಸಿ ಆದೇಶಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: