ಮೈಸೂರು

ಲಾರಿ ದರೋಡೆ ಮಾಡಿದ್ದ 6 ಮಂದಿ, ಖರೀದಿಸಿದ್ದ ಓರ್ವನ ಬಂಧನ : ಲಾರಿ ವಶ

ಮೈಸೂರು,ಜೂ.19:- ಲಾರಿ ದರೋಡೆ ಮಾಡಿದ್ದ 6 ಮಂದಿಯನ್ನು ಮತ್ತು ಕಳುವು ಮಾಲು ಸ್ವೀಕರಿಸಿದ್ದ  ಓರ್ವನನ್ನು ನರಸಿಂಹರಾಜ ಠಾಣೆಯ ಪೊಲೀಸರು ಬಂಧಿಸಿದ್ದು, 10 ಲಕ್ಷ ಮೌಲ್ಯದ 1 ಲಾರಿ ಹಾಗೂ ಕೃತ್ಯಕ್ಕೆ ಬಳಸಿದ್ದ 3 ದ್ವಿಚಕ್ರ ವಾಹನಗಳು,5 ಮೊಬೈಲ್‍ ಗಳನ್ನು ವಶಪಡಿಸಿಕೊಂಡಿದ್ದಾರೆ.
ನರಸಿಂಹರಾಜ ಪೊಲೀಸರು  16.06.2021ರಂದು ಠಾಣಾ ಸರಹದ್ದಿನ ಬನ್ನಿಮಂಟಪ,
ಎಸ್.ಎಸ್ ನಗರದ ಶ್ರೀ ಸಾಯಿರಂಗ ವಿದ್ಯಾಸಂಸ್ಥೆ ಬಳಿ ಗಸ್ತಿನಲ್ಲಿದ್ದಾಗ ಒಂದು ಸುಜುಕಿ ಆಕ್ಸಿಸ್ ಸ್ಕೂಟರ್‍ನಲ್ಲಿ ಬರುತ್ತಿದ್ದು, ಪೊಲೀಸರನ್ನು ನೋಡಿ ವಾಹನವನ್ನು ವಾಪಸ್ ತಿರುಗಿಸಿಕೊಂಡು ಹೋಗಲು ಪ್ರಯತ್ನಿಸಿದ ಮುದಾಸೀರ್ ಪಾಷ ಬಿನ್ ಕಿಜರ್ ಪಾಷ, (33), ಮನೆ ನಂಃ 230, 8ನೇ ಕ್ರಾಸ್, ಅಮರ್ ಮಸೀದಿ ಹತ್ತಿರ, ಶಾಂತಿನಗರ, ಮೈಸೂರು, ಸಲ್ಮಾನ್ ಖಾನ್ ಬಿನ್ ಜಾವಿದ್ ಖಾನ್,( 25 ) ಮೆಕಾನಿಕ್ ಕೆಲಸ, ನಂಃ 3202, 2ನೇ ಕ್ರಾಸ್, ನಿಮ್ರಾ ಮಸೀದಿ ಹತ್ತಿರ, ಹಿಲ್‍ಟಾಪ್ ರಸ್ತೆ, ರಾಜೀವ್ ನಗರ 1ನೇ ಹಂತ, ಮೈಸೂರು ನಗರ ಎಂಬವರನ್ನು ಬೆನ್ನಟ್ಟಿ ಹಿಡಿದು, ಸ್ಕೂಟರ್‍ನ ಮುಂಭಾಗದಲ್ಲಿ ಲಾರಿಗೆ ಸಂಬಂಧಿಸಿದ ಕಬ್ಬಿಣದ ಡೀಸೆಲ್ ಟ್ಯಾಂಕ್ ಗಾರ್ಡ್, ಕ್ಯಾಬಿನ್ ಬಿಡಿ ಭಾಗ ಮತ್ತು Sanjay Ramasamy ಎಂಬ ಹೆಸರಿನ ಲಾರಿಯ ಮುಂಭಾಗದ ಬೋರ್ಡ್ ಇಟ್ಟುಕೊಂಡಿದ್ದು, ಅವುಗಳ ಬಗ್ಗೆ ವಿಚಾರ ಮಾಡಲಾಗಿ, ಈ ಆರೋಪಿಗಳು
ತಮ್ಮ ಇತರೆ ನಾಲ್ಕು ಸ್ನೇಹಿತರುಗಳೊಂದಿಗೆ ಸೇರಿಕೊಂಡು ಈಗ್ಗೆ ಸುಮಾರು 3 ದಿನಗಳ ಹಿಂದೆ ರಿಂಗ್ ರಸ್ತೆಯ ಲಲಿತಾದ್ರಿ ನಗರದ ಬಳಿ ನಿಂತಿದ್ದ ತಮಿಳುನಾಡು ರಾಜ್ಯ ರಿಜಿಸ್ಟ್ರೇಷನ್ ಇರುವ 12 ಚಕ್ರದ ಲಾರಿಯ ಚಾಲಕನಿಗೆ ಡ್ರ್ಯಾಗನ್ ಚಾಕು ತೋರಿಸಿ ಹೆದರಿಸಿ, ಲಾರಿಯನ್ನು ತೆಗೆದುಕೊಂಡು ಹೋಗಿ ಅದನ್ನು ಶ್ರೀನಿವಾಸ್ ಟಾಕೀಸ್ ರಸ್ತೆಯಲ್ಲಿರುವ ಗುಜರಿಯಲ್ಲಿ ಹಾಕಿ ಲಾರಿಯ ಕ್ಯಾಬಿನ್ ಮತ್ತು ಸೈಡ್
ಕ್ಯಾಬಿನ್ ನ ಬಿಡಿ ಭಾಗಗಳನ್ನು ಬಿಚ್ಚಿದ್ದು, ಅದರಲ್ಲಿ ಕೆಲವು ಬಿಡಿ ಭಾಗಗಳನ್ನು ಮಾರಾಟ ಮಾಡುವ ಸಲುವಾಗಿ ಸ್ಕೂಟರ್ ನಲ್ಲಿ ಹಾಕಿಕೊಂಡು ಬರುತ್ತಿದ್ದುದ್ದಾಗಿ ತಿಳಿಸಿದ್ದರಿಂದ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು, ಇವರುಗಳು ತಿಳಿಸಿದ ಮಾಹಿತಿ ಮೇರೆಗೆ ದರೋಡೆಯಲ್ಲಿ ಭಾಗಿಯಾಗಿದ್ದ ಇತರೆ ಆರೋಪಿಗಳಾದ –
ಮಹಮ್ಮದ್ ಇರ್ಫಾನ್ @ ಪುಲ್ಚ ಬಿನ್ ಜಹೀರ್ ಅಹಮ್ಮದ್ ( 27), ನಂ.404, 1ನೇ
ಕ್ರಾಸ್, ಅಮರ್ ಮಸೀದಿ ಹತ್ತಿರ, ಶಾಂತಿನಗರ, ಮೈಸೂರು ನಗರ, ಮಹಮ್ಮದ್ ಹುಸೇನ್ ಬಿನ್ ನಜೀರ್ ಅಹಮ್ಮದ್ (27), ನಂ.865, ಗ್ಲೋಬಲ್
ಮೆಡಿಕಲ್ ಹತ್ತಿರ, ಗುಪ್ತ ಸ್ಟೋರ್ ಮುಖ್ಯ ರಸ್ತೆ, ರಾಜೀವ್ ನಗರ 2ನೇ ಹಂತ, ಮೈಸೂರು, ಮಹಮ್ಮದ್ ಜವಾದ್ ಬಿನ್ ಮಹಮ್ಮದ್ ಅನೀಸ್, (31) ನಂ.1606, 4ನೇ ಕ್ರಾಸ್, ಮಕ್ಕಾ ಮಸೀದಿ ಹತ್ತಿರ, ಶಾಂತಿನಗರ, ಮೈಸೂರು ನಗರ,
ತಮೀಮ್‍ವುಲ್ಲಾ ಷರೀಫ್ @ ನವಾಬ್ ಬಿನ್ ಲೇಟ್ ರೆಹಮತ್ ಉಲ್ಲಾ ಷರೀಫ್,
(31) ವರ್ಷ, ನಂ.1672, 5ನೇ ಕ್ರಾಸ್, ಮೆಕ್ಕಾ ಮಸೀದಿ ಹತ್ತಿರ, ರಾಜೀವ್ ನಗರ 1ನೇ
ಹಂತ, ಮೈಸೂರು ನಗರ ಹಾಗೂ ಕಳ್ಳತನದ ಮಾಲನ್ನು ಸ್ವೀಕರಿಸಿದ್ದ
ಸಲ್ಮಾನ್ ಖಾನ್ ಬಿನ್ ಅಫೀಜ್ ಖಾನ್ (30), ಮನೆ ನಂ.18, ಬಿ.ಬಿ.ಕೇರಿ, ಮಂಡಿ
ಮೊಹಲ್ಲಾ, ಮೈಸೂರು ನಗರ. ಎಂಬವರುಗಳನ್ನು ದಸ್ತಗಿರಿ ಮಾಡಿ, ಆರೋಪಿಗಳಿಂದ 10 ಲಕ್ಷ ರೂ ಬೆಲೆ ಬಾಳುವ  ಅಶೋಕ್ ಲೈಲ್ಯಾಂಡ್ ಲಾರಿ, ಕೃತ್ಯಕ್ಕೆ ಉಪಯೋಗಿಸಿದ್ದ 03 ದ್ವಿಚಕ್ರ ವಾಹನ, 01 ಚಾಕು ಮತ್ತು 05 ಮೊಬೈಲ್ ಫೋನ್‍ಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.
ಈ ಪತ್ತೆ ಕಾರ್ಯದಿಂದ ಮೈಸೂರು ಜಿಲ್ಲೆ, ದಕ್ಷಿಣ ಪೊಲೀಸ್ ಠಾಣೆಯ 01 ಸುಲಿಗೆ ಪ್ರಕರಣವು ಪತ್ತೆಯಾಗಿದ್ದು, ಆರೋಪಿಗಳು ತಮ್ಮ ಶೋಕಿಗಳಿಗೆ ಲಾರಿಯನ್ನು ದರೋಡೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿಸಿಪಿ ರವರಾದ   ಗೀತಪ್ರಸನ್ನ
ಮತ್ತು ನರಸಿಂಹರಾಜ ವಿಭಾಗದ ಎ.ಸಿ.ಪಿ ರವರಾದ   ಶಿವಶಂಕರ್   ಮಾರ್ಗದರ್ಶನದಲ್ಲಿ ನರಸಿಂಹರಾಜ ಪೊಲೀಸ್ ಇನ್ಸಪೆಕ್ಟರ್   ಅಜರುದ್ದೀನ್, ಪಿ.ಎಸ್.ಐ   ಅಶ್ವಿನಿ, ಎ.ಎಸ್.ಐ ಪಾಪಣ್ಣ ಮತ್ತು ಸಿಬ್ಬಂದಿಗಳಾದ ಮಂಜುನಾಥ ಆರ್.ಆರ್, ಮಹೇಶ್ ವೈ.ಟಿ, ದೊಡ್ಡೇಗೌಡ, ರಮೇಶ್ ಎಸ್, ಸುನೀಲ್ ಕುಮಾರ್.ಸಿ, ಈರೇಶ್.ಕೆ ಅವರುಗಳು ಪಾಲ್ಗೊಂಡಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ.ಚಂದ್ರಗುಪ್ತ ಪ್ರಶಂಸಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: