ಮೈಸೂರು

ಜಿಮ್ ಟ್ರೈನರ್ ಗಳಿಗೆ ದಿನಸಿ ಕಿಟ್ ವಿತರಣೆ

ಮೈಸೂರು, ಜೂ.20:-  ಕೊರೋನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಜಿಮ್ ಟ್ರೈನರ್ ಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.

ಸರಸ್ವತಿ ಪುರಂನಲ್ಲಿರುವ ಮೈಸೂರು ಜಿಮ್ ಅಂಡ್ ಫಿಟ್ ನೆಸ್ ಮಾಲೀಕರ ಸಂಘದ ಅಧ್ಯಕ್ಷ ದಿನಸಿ ಕಿಟ್ ವಿತರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಜೀಮ್ ವೃತ್ತಿಯನ್ನೇ ನಂಬಿ ಬದುಕುತ್ತಿದ್ದ ಟ್ರೈನರ್ ಗಳು ಲಾಕ್ ಡೌನ್ ನಿಂದ ತೊಂದರೆಯಲ್ಲಿದ್ದಾರೆ.ಆದ್ದರಿಂದ ಸಂಘದ ವತಿಯಿಂದ ಮೈಸೂರಿನ ಎಲ್ಲಾ ಜಿಮ್ ಟ್ರೈನರ್ ಗಳಿಗೆ ಕಿಟ್ ಹಂಚಿಕೆ ಮಾಡಿದ್ದೇವೆ.ಮುಂದಿನ ದಿನಗಳಲ್ಲೂ ಜಿಮ್ ಟ್ರೈನರ್ ಗಳ ಜೊತೆ ನಾವಿದ್ದೇವೆ ಎಂದು ಹರ್ಷ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: