ಮೈಸೂರು

ಯೋಗ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರು ಗಳಿಗೆ ಯೋಗ ವೈಢೂರ್ಯ  ಪ್ರಶಸ್ತಿ ಪ್ರದಾನ

ಮೈಸೂರು, ಜೂ.20:-  ಮೈಸೂರು ಅದ್ಬುತ ನಗರಿಯಾಗಿದ್ದು ,ಇಲ್ಲಿ ವ್ಯಾಪಾರಿಕರಣ ಕ್ಕಿಂತ ಭಾವನೆಗಳ ಜೊತೆ ಬದುಕುವವರೇ ಹೆಚ್ಚಿರುವುದರಿಂದ ಮೈಸೂರು ಯೋಗಕ್ಕೆ ವಿಶ್ವದಲ್ಲೇ ಮಾನ್ಯತೆ ಇದೆ ಎಂದು ಹಿರಿಯ ಯೋಗಾಚಾರ್ಯರಾದ ಶ್ರೀಹರಿ ಅಭಿಪ್ರಾಯ ಪಟ್ಟರು.
ವಿಶ್ವ ಯೋಗ ದಿನಾಚರಣೆ ಅಂಗವಾಗಿ ಚಾಮುಂಡಿಪುರಂನಲ್ಲಿರುವ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಹಾಗೂ ಹಿಮಾಲಯ ಫೌಂಡೇಷನ್ ಸಹಯೋಗದೊಂದಿಗೆ
ಯೋಗ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಸಾಧಕರು ಗಳಿಗೆ ಯೋಗ ವೈಢೂರ್ಯ  ಪ್ರಶಸ್ತಿ 2021 ಪ್ರದಾನ ಮಾಡಲಾಯಿತು.

ಯೋಗ ವೈಢೂರ್ಯ ಪ್ರಶಸ್ತಿ ಸ್ವೀಕರಿಸಿದ ರಾಕೇಶ್ ಸಿ ಶಿವರಾಮು, ಶ್ರೀಹರಿ ಎಸ್, ಎನ್ ಆಶಾದೇವಿ, ರಾಕೇಶ್ ಜೈನ್ ಎಂ ಪಿ ರಮೇಶ್ ಬಾಬು ಅವರನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಂತರ ಮಾತನಾಡಿದ ಹಿರಿಯ ಯೋಗಾಚಾರ್ಯರಾದ ಶ್ರೀಹರಿ ಇಂದು ಭಾರತದಾದ್ಯಂತ ಅಸಂಖ್ಯಾತ ಯೋಗಕೇಂದ್ರ ಗಳಿದ್ದರೂ ವಿದೇಶಿಯರು ಮೈಸೂರಿನ ಅಧಿಕ ಸಂಖ್ಯೆಯಲ್ಲಿ ಯೋಗ ಕಲಿಯಲು ಆಗಮಿಸುತ್ತಾರೆ ಎಂದರೆ ಅದಕ್ಕೆ ಇಲ್ಲಿನ ಪರಂಪರೆಯೇ ಕಾರಣ ಎಂದು ವಿಶ್ಲೇಷಿಸಿದರು.
ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ಮಾತನಾಡಿ ಮೈಸೂರಿನಲ್ಲಿ ಯೋಗ ಉನ್ನತವಾಗಿ ಬೆಳೆಯಲು ಶ್ರೀ ಕೃಷ್ಣಮಾಚಾರ್ಯರು ಹಾಕಿಕೊಟ್ಟ ಮೇಲ್ಪಂಕ್ತಿ ಕಾರಣ ಎಂದರು.

ಇವರ ನಂತರ ಅದೇ ಹಾದಿಯಲ್ಲಿ ಸಾಗಿ ಬಂದ ಡಾ.ಬಿ ಕೆ ಎಸ್ ಅಯ್ಯಂಗಾರ್ ,ಪಟ್ಟಾಭಿ ಜೋಯಿಸ್ ಯೋಗವನ್ನು ವಿಶ್ವದಾದ್ಯಂತ ಪ್ರಚಾರ ಪಡಿಸಿದರು ಎಂದರು.
ಹಿರಿಯ ಸಮಾಜ ಸೇವಕ ರಾದ ಡಿ ಟಿ ಪ್ರಕಾಶ್  ಮಾತನಾಡಿ ಕೊರೋನಾ ಸಂದರ್ಭವಾದ್ದರಿಂದ ಯೋಗವನ್ನು ಸಂಭ್ರಮ ಸಡಗರದಿಂದ ಆಚರಿಸಿ ಕೊಳ್ಳಲಾರದ ಈ ಪರಿಸ್ಥಿತಿಯಲ್ಲಿ ಸಾಂಕೇತಿಕವಾಗಿ ಯೋಗ ಸಾಧಕರು ಗಳನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದೇ ಹೆಗ್ಗಳಿಕೆಯ ವಿಚಾರ ವಾಗಿದೆ ಎಂದರು.

ಇದೇ ಸಂದರ್ಭದಲ್ಲಿ   ಜಿಲ್ಲಾ ಕನ್ನಡ ಪರಿಷತ್ ಮಾಜಿ ಅಧ್ಯಕ್ಷ ರಾದ ಮಡ್ಡಿಕೆರೆ ಗೋಪಾಲ್ ,ಉದ್ಯಮಿ ಅಪೂರ್ವ ಸುರೇಶ್ ,ಶಾಂತರಾಜ ಅರಸ್ ,ಯೋಗ ಶಿಕ್ಷಕರಾದ ಅನಂತ್ ದೀಕ್ಷಿತ್ ,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಜಾ ವಿಕ್ರಮ ಅಯ್ಯಂಗಾರ್ ,ಖ್ಯಾತ ವ್ಯಂಗ್ಯಚಿತ್ರಕಾರ ಎಂ ವಿ ನಾಗೇಂದ್ರ ಬಾಬು ,ಕೆ ಎಸ್ ಮುಕುಂದ್  ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: