ಮೈಸೂರು

ಕಾರಿನಲ್ಲಿ ಬಂದ ಹೈಟೆಕ್ ಕಳ್ಳರಿಂದ ಕಾರು ಕಳ್ಳತನ

ಎರಡು ಕಾರುಗಳಲ್ಲಿ ಬಂದ ಹೈಟೆಕ್  ಕಳ್ಳರು ಮನೆಯ ಮುಂದೆ ನಿಲ್ಲಿಸಿದ್ದ  ಇಂಡಿಗೋ ಕಾರನ್ನು ಚಾಣಾಕ್ಷತನದಿಂದ ಕದ್ದೊಯ್ದ ಘಟನೆ ಮೈಸೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಮೈಸೂರಿನ ಟಿ.ಕೆ.ಲೇಔಟ್ ನಲ್ಲಿನ ಮಾಜಿ ಶಾಸಕ ದಿ.ಶಂಕರಲಿಂಗೇಗೌಡರ ಮನೆಯ ಸಮೀಪದ ಮನೆಯೊಂದರಲ್ಲಿ ಹಾಲಿ ವಾಸವಿರುವ ಶ್ರಿರಂಗಪಟ್ಟಣ ಮೂಲದ ನಿವಾಸಿ ಸಾಯಿಕುಮಾರ್ ಅವರು ಮನೆಯ ಮುಂದೆ ಲಾಕ್ ಮಾಡಿ ನಿಲ್ಲಿಸಿದ್ದ ಇಂಡಿಗೋ ಕಾರನ್ನು ಎರಡು ಕಾರುಗಳಲ್ಲಿ ಬಂದ ಏಳುಮಂದಿ ಕಳ್ಳರು ಏ.24ರಂದು ಬೆಳಗಿನ ಜಾವ 4.30ರ ಸುಮಾರಿಗೆ ಕದ್ದೊಯ್ದಿದ್ದಾರೆ.  ತಾವು ಬಂದಿಳಿದ ಕಾರನ್ನು ಪಕ್ಕದಲ್ಲಿ ನಿಲ್ಲಿಸಿದ ಕಳ್ಳರು ಇಂಡಿಗೋ ಕಾರನ್ನು ಸುಲಭವಾಗಿ ತೆರೆದು ತಾವು ತಂದಿದ್ದ ಕಾರು ಸೇರಿದಂತೆ ಮೂರು ಕಾರಿನಲ್ಲಿ  ಪರಾರಿಯಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸರಸ್ವತಿಪುರಂ ಠಾಣೆಯಲ್ಲಿ ಕಾರುಕಳ್ಳತನವಾಗಿರುವ ಕುರಿತು ದೂರು ದಾಖಲಾಗಿದೆ.

ಕಳ್ಳರು ಬೈಕ್ ಲ್ಲೋ, ಸೈಕಲ್ ನಲ್ಲೋ ಅಥವಾ ಕಾಲುನಡಿಗೆಯಲ್ಲೋ ಬರುತ್ತಿದ್ದರು. ಆದರೆ ಈಗ ಕಾಲ ಬದಲಾದಂತೆ ಅವರಲ್ಲಿಯೂ ಬದಲಾವಣೆಗಳು ಕಾಣಿಸಿಕೊಳ್ಳುತ್ತಿವೆ. ಕಳ್ಳರೂ ಕಾರಿನಲ್ಲಿ ಬರುತ್ತಾರೆ. ಇದು ಮೈಸೂರಿನ ಇತಿಹಾಸದಲ್ಲಿಯೇ ಮೊದಲ ಬಾರಿ ಇಂತಹ ಕಳ್ಳತನ ನಡೆದಿದೆ. ಇನ್ನು ಎಲ್ಲರನ್ನೂ ಅನುಮಾನದಿಂದ ನೋಡುವ ಪರಿಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ. ಇನ್ನು ತಮ್ಮ ತಮ್ಮ ಮನೆಯ ಮುಂದೆ ವಾಹನಗಳನ್ನು ನಿಲ್ಲಿಸುವವರು ಹೆಚ್ಚಿನ ಜಾಗೃತೆ ವಹಿಸಬೇಕಾದ ಅಗತ್ಯವಿದೆ. ಇದೇ ರೀತಿಯ ಘಟನೆಗಳು ಪುರಾವರ್ತನೆಯಾಗದಂತೆ ಪೊಲೀಸರು ಹೆಚ್ಚಿನ ಗಮನವಿರಿಸುವ ಅಗತ್ಯವಿದೆ ಎಂಬ ಮಾತುಗಳೂ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: