ಮೈಸೂರು

ವಿಧವೆಯರಿಗೆ ಆರೋಗ್ಯ ತಪಾಸಣೆ ಹಾಗೂ ದಿನಸಿ ಕಿಟ್ ವಿತರಣೆ :  ಪಾಲಿಕೆ ಸದಸ್ಯ ಸಮೀಉಲ್ಲಾ ಅಜ್ಜು ಹಾಗೂ ಸಹೋದರರಿಂದ ಸಮಾಜ ಸೇವೆ

ಮೈಸೂರು, ಜೂ.21:- ಮೈಸೂರು ಮಹಾನಗರಪಾಲಿಕೆ ವಾರ್ಡ್ ನಂ.9ರ ಸಮೀಉಲ್ಲಾ ಅಜ್ಜು ಹಾಗೂ ಅವರ ಸಹೋದರರು ಇಂದು ಕೆಸರೆ ಆರ್‍ ಓ ಪ್ಲಾಂಟ್ ಬಳಿ ಸುಮಾರು 500ಕ್ಕೂ ಅಧಿಕ ವಿಧವೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ಔಷಧಿಗಳ ವಿತರಣೆ ಹಾಗೂ ದಿನಸಿ ಕಿಟ್ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಮೌಲ್ವಿಗಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಮಾತನಾಡಿದ ಅಜ್ಜು   ಲಾಕ್‍ ಡೌನ್ ಪ್ರಾರಂಭವಾದ 35 ದಿನಗಳಿಂದ ನಾವು ಪ್ರತಿನಿತ್ಯ ಕೆ.ಆರ್.ಆಸ್ಪತ್ರೆ ರೋಗಿಗಳಿಗೆ ಉಚಿತವಾಗಿ 700 ಆಹಾರ ಪೊಟ್ಟಣಗಳನ್ನು ನೀಡುತ್ತಿದ್ದೇವೆ. ಕಳೆದ ವಾರ 300ಕ್ಕೂ ಅಧಿಕ ಆಟೋ ಚಾಲಕರಿಗೆ ಹಾಗೂ ಟಾಂಗಾ ಸವಾರರಿಗೆ ದಿನಸಿ ಕಿಟ್ ಅನ್ನು ವಿತರಿಸಿದ್ದೇವೆ. ಬರೀ ಟಾಂಗಾ ಸವಾರರಿಗೆ ಆಹಾರ ಕೊಟ್ಟರೆ ಸಾಲದು. ಅದರ ಸಾರಥಿ ಕುದುರೆಗೂ ಆಹಾರ ನೀಡಬೇಕು. ಅದಕ್ಕೋಸ್ಕರ ಕುದುರೆಗಳಿಗೂ ಬೂಸ ಹಾಗೂ ಹುಲ್ಲುಗಳನ್ನು ನೀಡಿದೆವು. ನಮಗೆ ಮೈಸೂರಿನಲ್ಲಿ ಇಷ್ಟು ಮಟ್ಟದ ಪ್ರಮಾಣದಲ್ಲಿ ಟಾಂಗಗಳು ಇದೆ ಎಂದು ಆಗಲೇ ತಿಳಿದದ್ದು. ಏಕೆಂದರೆ ರಾಜ ಮಹಾರಾಜರ ಕಾಲದಲ್ಲಿ ಟಾಂಗಾಗಳ ಸಂಖ್ಯೆ ಅಧಿಕವಾಗಿದ್ದವು. ಬರುಬರುತ್ತಾ ಅದರ ಸಂಖ್ಯೆ ಕ್ಷೀಣಿಸುತ್ತಾ ಬಂತು. ಆದರೂ ಇಂದಿನ ದಿನಗಳಲ್ಲೂ ಇಷ್ಟು ಪ್ರಮಾಣದ ಟಾಂಗಾಗಳು ಮೈಸೂರಿನಲ್ಲಿವೆ ಎಂದರೆ ಅದು ಆಶ್ಚರ್ಯವೇ ಸರಿ. ಇಂದು ವಿಧವೆಯರಿಗೆ ದಿನಸಿ ಕಿಟ್ ಕೊಡುವ ಮುಖಾಂತರ ನಮ್ಮ ಕೈಲಾದ ಮಾಡುತ್ತಿದ್ದೇವೆ. ವಿಧವೆಯರಿಗೆ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಪಿಂಚಣಿ ಬರುತ್ತದೆ. ಆ ಹಣ ಅವರ ರಕ್ತದೊತ್ತಡ ಹಾಗೂ ಮಧುಮೇಹದ ಔಷಧಿಗಳಿಗೆ ಖರ್ಚಾಗುತ್ತದೆ. ಇವರು ಮನೆಗೆಲಸ, ಕೂಲಿ ಕೆಲಸ ಮಾಡಿಕೊಂಡು ಅಂದಿನ ಸಂಪಾದನೆಯಿಂದ ಜೀವನ ನಿರ್ವಹಣೆ ಮಾಡುತ್ತಿದ್ದರು.ಲಾಕ್‍ ಡೌನ್‍ ನಿಂದಾಗಿ ಅವರು ಒಪ್ಪತ್ತಿನ ಊಟಕ್ಕೂ ಕಷ್ಟ ಪಡುವ ಸ್ಥಿತಿ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಲಾಕ್‍ ಡೌನ್ ಇನ್ನು ಕೆಲವು ದಿನಗಳ ಕಾಲ ಮುಂಡೂಡಲ್ಪಟ್ಟಿದೆ. ಲಾಕ್‍ ಡೌನ್ ಪ್ರಕ್ರಿಯೆ ಮೈಸೂರಿನಲ್ಲಿ ಸಂಪೂರ್ಣವಾಗಿ ಅನ್‍ ಲಾಕ್ ಆಗುವವರೆಗೂ ನಮ್ಮ ದಿನನಿತ್ಯದ ಚಟುವಟಿಕೆಗಳನ್ನು ಹೀಗೆಯೇ ಮುಂದುವರೆಸುತ್ತೇವೆ ಎಂದು  ತಿಳಿಸಿದರು. ಕಾರ್ಯಕ್ರಮದಲ್ಲಿ ಸಮೀಉಲ್ಲಾ ಅಜ್ಜು, ಜಬೀ ಅಜ್ಜು, ಮೌಲ್ವಿಗಳು ಹಾಗೂ ಇತರರು ಉಪಸ್ಥಿತರಿದ್ದರು.   (ಜಿ.ಕೆ,ಎಸ್.ಎಚ್)

Leave a Reply

comments

Related Articles

error: