ಮೈಸೂರು

ಇಂದು ಸಂಜೆ ಡಿ ಆರ್‍ ಡಿ ಓ ನಿವೃತ್ತ ಮಹಾನಿರ್ದೇಶಕರಾದ ಡಾ. ವಿ.ಕೆ. ಆತ್ರೆಯವರಿಂದ ಉಪನ್ಯಾಸ

ಮೈಸೂರು,ಜೂ.21:- ಜೆ ಎಸ್‍ ಎಸ್ ಮಹಾವಿದ್ಯಾಪೀಠ ಮತ್ತು ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ಆಶ್ರಯದಲ್ಲಿ ಪ್ರತಿ ಸೋಮವಾರ ಆನ್‍  ಲೈನ್ (ವರ್ಚುವಲ್) ಮೂಲಕ ಜ್ಞಾನ ವಾರಿಧಿ ಸಾಪ್ತಾಹಿಕ ಉಪನ್ಯಾಸ ಮಾಲೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.

ಜ್ಞಾನ ವಾರಿಧಿ-29 ಡಿಜಿಟಲ್ ಉಪನ್ಯಾಸ ಕಾರ್ಯಕ್ರಮವು  ಇಂದು  ಸಂಜೆ 6  ಗಂಟೆಗೆ  ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ನಡೆಯಲಿದೆ. ಡಿಆರ್‍ ಡಿ ಓ ನಿವೃತ್ತ ಮಹಾನಿರ್ದೇಶಕರು ಹಾಗೂ ಹಿರಿಯ ವಿಜ್ಞಾನಿಗಳಾದ ಡಾ. ವಿ.ಕೆ. ಆತ್ರೆಯವರು “ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತ ಮಹಾನ್ ಶಕ್ತಿಯಾಗಲು ಸಾಧ್ಯವೆ” ಎಂಬ ವಿಷಯ ಕುರಿತು ಆನ್‍ ಲೈನ್ ನಲ್ಲಿ ಉಪನ್ಯಾಸ ನೀಡಲಿದ್ದಾರೆ.  ಉಪನ್ಯಾಸದ ನಂತರ ಆನ್‍ ಲೈನ್‍ ನಲ್ಲಿ ಬರುವ ಪ್ರಶ್ನೆಗಳಲ್ಲಿ ಆಯ್ದವುಗಳಿಗೆ ಉತ್ತರಿಸಲಾಗುವುದು.

ಪ್ರತಿ ಸೋಮವಾರವೂ ನಡೆಯುವ ಈ ಉಪನ್ಯಾಸದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನ, ಧರ್ಮ, ಅಧ್ಯಾತ್ಮ, ಯೋಗ, ಆರೋಗ್ಯ, ಜೀವನಶೈಲಿ ಮುಂತಾದ ವಿಷಯಗಳು ಮತ್ತು ಪ್ರಚಲಿತ ವಿದ್ಯಮಾನಗಳನ್ನು ಕುರಿತು ದೇಶ ಮತ್ತು ವಿದೇಶದ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳನ್ನು ಆಯೋಜಿಸಲಾಗಿದೆ. ಆನ್‍ಲೈನ್ ಮೂಲಕ ನಡೆಯುವ ಈ ಉಪನ್ಯಾಸ ಕಾರ್ಯಕ್ರಮವು ಸಾಕಷ್ಟು ಜನಪ್ರಿಯಗೊಂಡಿದೆ.

ಈ ಉಪನ್ಯಾಸವನ್ನು Yotube http://Youtube.com/c/JSSMahavidyapeethaonline https://www.facebook.com/JSSMVP, http://jssonline.org ಲಿಂಕ್‍ ಗಳ ಮೂಲಕ ಕೇಳಬಹುದಾಗಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: