ಕ್ರೀಡೆಪ್ರಮುಖ ಸುದ್ದಿ

ಬಯೋ ಬಬಲ್ ನಿಂದ ಹೊರ ಬಂದ ಟೀಂ ಇಂಡಿಯಾದ ಐವರು ಆಟಗಾರರು

ಸೌಥಾಂಪ್ಟನ್‌,ಜೂ.21-ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ನಲ್ಲಿ ಅವಕಾಶ ಪಡೆಯದ ಭಾರತದ ಐವರು ಕ್ರಿಕೆಟಿಗರನ್ನು ಬಯೋ ಬಬಲ್ (ಜೈವಿಕ ಸುರಕ್ಷಾ ವಲಯ) ನಿಂದ ಬಿಡುಗಡೆಗೊಳಿಸಲಾಗಿದೆ.

ಸುದೀರ್ಘ‌ ಪ್ರವಾಸದ ಹಿನ್ನೆಲೆಯಲ್ಲಿ ಆಟಗಾರರು ಮಾನಸಿಕವಾಗಿ ಕುಗ್ಗಬಾರದು ಎಂಬುದು ಇದರ ಉದ್ದೇಶ. ಚಾಂಪಿಯನ್ ಶಿಪ್ ಫೈನಲ್ ಗೆ ಅಂತಿಮಗೊಳಿಸಿದ 15 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯದ ಮಾಯಾಂಕ್‌ ಅಗರ್ವಾಲ್‌, ಶಾರ್ದೂಲ್‌ ಠಾಕೂರ್‌, ಕೆ.ಎಲ್‌.ರಾಹುಲ್‌, ವಾಷಿಂಗ್ಟನ್‌ ಸುಂದರ್‌ ಮತ್ತು ಅಕ್ಷರ್‌ ಪಟೇಲ್‌ ಇದೀಗ ಜೈವಿಕ ಸುರಕ್ಷಾ ವಲಯದಿಂದ ಹೊರ ಬಂದಿದ್ದಾರೆ.

ಕಳೆದ ಮೇ 19ರಿಂದ ಭಾರತದ ಆಟಗಾರರು ಬಯೋ ಬಬಲ್ ನಲ್ಲಿದ್ದಾರೆ. ಅಂದು ಮುಂಬೈ ಹೋಟೆಲ್ ನಲ್ಲಿ ಕ್ವಾರಂಟೈನ್ ಗೆ ಒಳಗಾದ ಆಟಗಾರರು ಬಳಿಕ ಇಂಗ್ಲೆಂಡ್ ಗೆ ಆಗಮಿಸಿ ಅಲ್ಲಿ ಕ್ವಾರಂಟೈನ್ ನಲ್ಲಿದ್ದರು. ಚಾಂಪಿಯನ್ ಶಿಪ್ ಫೈನಲ್ ಬಳಿಕ ಇಂಗ್ಲೆಂಡ್ ಸರಣಿಗೆ ಇನ್ನೂ ಒಂದು ತಿಂಗಳ ಕಾಲ ಸಮಯವಿದೆ. ಈ ವೇಳೆ ಆಟಗಾರರು ನಿರಂತರ ಬಬಲ್ ನಲ್ಲಿದ್ದರೆ ಮಾನಸಿಕವಾಗಿ ಕುಗ್ಗುತ್ತಾರೆ ಎಂಬ ಕಾರಣಕ್ಕೆಅವರನ್ನು ಬಿಡುಗಡೆ ಮಾಡಲಾಗಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: