ಮೈಸೂರು

ಶೀಘ್ರದಲ್ಲೇ ಮೈಸೂರು ಕೂಡ ಅನ್ ಲಾಕ್ ಆಗುವ ವಿಶ್ವಾಸ ವ್ಯಕ್ತಪಡಿಸಿದ ಸಂಸದ ಪ್ರತಾಪ್ ಸಿಂಹ

ಮೈಸೂರು,ಜೂ.21:-  ಮೈಸೂರಿನಲ್ಲಿ ಪಾಸಿಟಿವಿಟಿ ರೇಟ್ 10% ಇದ್ದು, ಪಾಸಿಟಿವಿಟಿ ರೇಟ್ ಕಡಿಮೆ ಮಾಡುವ ಗುರಿ ಇಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ. ಶೀಘ್ರದಲ್ಲೇ ಮೈಸೂರು ಕೂಡ ಅನ್ ಲಾಕ್ ಆಗುವ ವಿಶ್ವಾಸವನ್ನು ಸಂಸದ ಪ್ರತಾಪ್ ಸಿಂಹ ವ್ಯಕ್ತಪಡಿಸಿದರು.

ಈ ಕುರಿತು ಮೈಸೂರಿನಲ್ಲಿಂದು ಪ್ರತಿಕ್ರಿಯಿಸಿರುವ  ಅವರು ಮೈಸೂರಿನಲ್ಲಿ ಲಾಕ್ ಡೌನ್ ಮುಂದುವರೆದಿದೆ. ಶೀಘ್ರವೇ ಪಾಸಿಟಿವಿಟಿ ರೇಟ್ ಕಡಿಮೆ ಮಾಡುತ್ತೇವೆ. ಮೈಸೂರು ಜಿಲ್ಲೆ ಅನ್ ಲಾಕ್ ಆಗುವಂತೆ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೀಡಿದ ಜವಾಬ್ದಾರಿ ಆಕ್ಸಿಜನ್ ಸಪ್ಲೈ ಮಾಡುವುದಾಗಿತ್ತು. 104 ಖಾಸಗಿ ಆಸ್ಪತ್ರೆ ಇರಬಹುದು, ಕೆ.ಆರ್.ಆಸ್ಪತ್ರೆ ಇರಬಹುದು, ಮಡಿಕೇರಿ, ಮಂಡ್ಯ, ಚಾಮರಾಜನಗರ ಕೋಟಾ ಇರಬಹುದು. ಇದನ್ನು ಒಂದೇ ಒಂದು ದೂರು ಬರದಂತೆ ಅಚ್ಚುಕಟ್ಟಾಗಿ ನಾನು ನಿರ್ವಹಿಸಿದೆ.ಆದರೆ ನಡುನಡುವೆ ನನಗನಿಸಿತು ಮೈಸೂರಿನಲ್ಲಿ ಪರಿಸ್ಥಿತಿ ಸರಿ ಇಲ್ಲ, ಪಾಸಿಟಿವಿಟಿ ರೇಟ್ ರಾಜ್ಯದಲ್ಲೇ ಅತಿ ಹೆಚ್ಚಿದೆ . ನಮ್ಮದು ರಾಜ್ಯದಲ್ಲೇ 27 ಮತ್ತು 28% ಇದ್ದೇವೆ. ಅದಕ್ಕಾಗಿಯೇ ನಾನು ಹಳ್ಳಿಕಡೆ ಹೆಚ್ಚು ಗಮನ ಹರಿಸಬೇಕು ಎಂದಿದ್ದೆ. ಇವತ್ತು ನಮ್ಮ ಮಾಧ್ಯಮದವರಿಗೂ ಅರಿವಾಗುತ್ತಿದೆ. ಮೇ ತಿಂಗಳೊಂದರಲ್ಲೇ ಸಾವಿರಕ್ಕಿಂತಲೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಗ್ರಾಮಾಂತರದಲ್ಲಿ ಕೂಡ ಕ್ರಿಟಿಕಲ್ ಕೇಸ್  ಆಗಿದ್ದು, ಇಲ್ಲಿ ಬಂದಾಗ ತೀರಿಕೊಳ್ಳುತ್ತಾರೆ. ಪಕ್ಕದಲ್ಲಿರುವ ಚಾಮರಾಜನಗರ, ಮಂಡ್ಯದಿಂದಲೂ ಇಲ್ಲಿ ಬಂದವರು ತೀರಿಕೊಂಡಿರುವುದು ಇದೆ. ಹಾಗಾಗಿ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ಇಷ್ಟೆಲ್ಲ ಪ್ರಯತ್ನದ ನಡುವೆಯೂ ಎಲ್ಲೋ ಒಂದು ಕಡೆ ವ್ಯವಸ್ಥಿತವಾದ ಯೋಜನೆ ಮಾಡದಿದ್ದ ಕಾರಣ ಪಾಸಿಟಿವಿಟಿ ರೇಟ್ 10% ಇದ್ದೇವೆ. ಅದನ್ನು ಸರಿಪಡಿಸಬೇಕು. ಅದಕ್ಕಾಗಿ ನಾವು ಕಳೆದ ಹತ್ತು ದಿನಗಳಿಂದ ಸಮರೋಪಾದಿಯಲ್ಲಿ ಎಲ್ಲ ಕೆಲಸವನ್ನು ಮಾಡುತ್ತಿದ್ದೇವೆ ನೂತನ ಡಿಸಿಯಾಗಿರುವ ಡಾ.ಬಗಾದಿ ಗೌತಮ್ ಅವರು ಸ್ವತಃ ಅವರಿಗೆ ಜ್ಞಾನವಿರುವ ಕಾರಣ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. 10% ಇರುವ ಪಾಸಿಟಿವಿಟಿ ರೇಟ್ ನ್ನು 5% ತಂದು ಬಳಿಕ ಮತ್ತೂ ಕಡಿಮೆ ಮಾಡಿ ಅನ್ ಲಾಕ್ ನ್ನು ಪ್ರಾರಂಭ ಮಾಡಬೇಕು. ಉದ್ಯಮಗಳಿಗೆ ಹೊಡೆತ ಬಿದ್ದಿದೆ ಅದನ್ನು ಸರಿಪಡಿಸಬೇಕೆಂಬುದೇ ನಮ್ಮ ಉದ್ದೇಶ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: