ಮೈಸೂರು

ದ್ವಿಚಕ್ರವಾಹನ ಮುಖಾಮುಖಿ : ಸವಾರರೀರ್ವರ ಸಾವು

ದ್ವಿಚಕ್ರವಾಹನಗಳೆರಡು ಪರಸ್ಪರ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಇಬ್ಬರೂ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತರನ್ನು ಮಂಟಿಗ್ರಾಮದ ನಿವಾಸಿ ಬಾಬು(44), ಹಾಗೂ ಮಂಚೇಗೌಡನ ಕೊಪ್ಪಲು ನಿವಾಸಿ ಗಿರೀಶ್ ಎಂದು ಗುರುತಿಸಲಾಗಿದೆ. ಬಾಬು ಎಂಬವರು ಮಂಗಳವಾರ ರಾತ್ರಿ ಗಾರೆ ಕೆಲಸಮುಗಿಸಿಕೊಂಡು ತೆರಳುತ್ತಿರುವಾಗ ಎದುರಿನಿಂದ ಬಂದ ಗಿರೀಶ್ ಇಬ್ಬರೂ ಪರಸ್ಪರ ಡಿಕ್ಕಿಯಾಗಿದ್ದಾರೆ. ಜೋರಾಗಿ ಮಳೆ ಸುರಿಯುತ್ತಿದ್ದರಿಂದ ಎದುರಿನಿಂದ ಬಂದ ವಾಹನಗಳು ಕಾಣಿಸದ ಹಿನ್ನೆಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗಿದೆ.

ವಿವಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: