ಮೈಸೂರು

ಅಂತಾರಾಷ್ಟ್ರೀಯ ಯೋಗ ದಿನ: ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಆನ್ಲೈನ್ ಯೋಗ ಸೆಷನ್; 52ಕ್ಕೂ ಹೆಚ್ಚು ಮಂದಿ ಭಾಗಿ

ಮೈಸೂರು,ಜೂ.21- ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಆನ್ ಲೈನ್ ಯೋಗ ಸೆಷನ್ ನಲ್ಲಿ ಸುಮಾರು 52 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಸಾಂಕ್ರಾಮಿಕ ರೋಗದ ಸಮಯದಲ್ಲಿ ಅತ್ಯಂತ ಮುಖ್ಯವಾದ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಶಕ್ತಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇಂದು ಬೆಳಿಗ್ಗೆ ನಡೆದ ಯೋಗ ಸೆಷನ್ ಅನ್ನು ಖ್ಯಾತ ಕ್ಷೇಮ ಸಲಹಾತಜ್ಞೆ ಮತ್ತು ಲೈಫ್ ಕೋಚ್ ಸುಪ್ರಿಯಾ ದತ್ತಾ ನಡೆಸಿಕೊಟ್ಟರು. ರೋಗ ನಿರೋಧಕ ಶಕ್ತಿ ಸುಧಾರಿಸಲು ಯೋಗಾಭ್ಯಾಸದ ಮಹತ್ವವನ್ನು ಒತ್ತಿ ಹೇಳಿ ಸುಪ್ರಿಯಾ ಅವರು ಸೆಷನ್‌ ನಡೆಸಿಕೊಟ್ಟರು.

ಅಲ್ಲದೆ, ಕೋವಿಡ್‌-19 ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಜನರ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯದ ಮೇಲೆ ಅಪಾರ ಒತ್ತಡವನ್ನುಂಟು ಮಾಡಿವೆ. ಲಾಕ್‌ಡೌನ್‌ ಸಮಯದಲ್ಲಿ ಎದುರಿಸುವ ಅನಿಶ್ಚಿತತೆ ಮತ್ತು ಒಂಟಿತನವನ್ನು ನಿಭಾಯಿಸಲು ಜನರು ಸಹಾಯ ಮಾಡುವ ಜೊತೆಗೆ ಅವರ ದೈಹಿಕ ಸ್ವಾಸ್ಥ್ಯವನ್ನು ರಕ್ಷಿಸಿಕೊಳ್ಳಲು ಯೋಗ ಪ್ರಬಲ ಸಾಧನ ಎಂದು ಸುಪ್ರಿಯಾ ದತ್ತಾ ಹೇಳಿದರು.

ಕಾರ್ಯಕ್ರಮದ ಕುರಿತು ಮಾತನಾಡಿದ ಕೊಲಂಬಿಯಾ ಏಷಿಯಾ ಆಸ್ಪತ್ರೆಗಳ ಪ್ರಧಾನ ವ್ಯವಸ್ಥಾಪಕ ಡಾ.ಗೌತಮ್ ದಾಸ್, ಭಾರತ ಯೋಗದ ನೆಲೆ. ಸ್ವಾಸ್ಥ್ಯಕ್ಕೆ ಸಮಗ್ರವಾದ ಮಾರ್ಗದರ್ಶನ ಒದಗಿಸುವ ಈ ಪ್ರಾಚೀನ ಅಭ್ಯಾಸದ ಮಹತ್ವ ಹಲವು ಬಾರಿ ಕಡೆಗಣನೆಗೆ ಒಳಗಾಗುತ್ತದೆ. ಕೊಲಂಬಿಯಾ ಏಷಿಯಾ ಆಸ್ಪತ್ರೆಗಳಲ್ಲಿ ನಾವು ಯೋಗದ ಶಕ್ತಿ ಮತ್ತು ದೇಹ ಮತ್ತು ಮನಸ್ಸಿನ ಮೇಲೆ ಅದರ ಪ್ರಭಾವವನ್ನು ಬಲವಾಗಿ ನಂಬುತ್ತೇವೆ ಎಂದರು.

ನಮ್ಮ ಈ ಆನ್‌ಲೈನ್ ಯೋಗ ಸೆಷನ್‌, ಸಾಂಕ್ರಾಮಿಕ ಉಂಟು ಮಾಡಿರುವ ಒತ್ತಡದ ಸಮಯದಲ್ಲಿ ಸಕಾರಾತ್ಮಕತೆಯನ್ನು ಹರಡಲು ಮಾಡಿದ ಪ್ರಯತ್ನವಾಗಿತ್ತು. ಭೌತಿಕ ಮಾತ್ರವಲ್ಲದೆ ಮಾನಸಿಕ ಅಂಶಗಳತ್ತವೂ ಗಮನ ಕೇಂದ್ರೀಕರಿಸಿ ಬೇಕಾದ ಶಕ್ತಿ ಪಡೆಯುವ ಸಾಂಪ್ರದಾಯಿಕ ವಿಧಾನವಾದ ಯೋಗದತ್ತ ಜನರನ್ನು ಸೆಳೆಯಲು ಪ್ರಯತ್ನಿಸಲಾಯಿತು ಎಂದು ಹೇಳಿದರು. (ಎಂ.ಎನ್)

Leave a Reply

comments

Related Articles

error: