ಮೈಸೂರು

ಸಂಸದ ಪ್ರತಾಪ್ ಸಿಂಹ ಹುಟ್ಟುಹಬ್ಬದ ಪ್ರಯುಕ್ತ ಚಾಮುಂಡೇಶ್ವರಿ ನಗರ ಮಂಡಲದಿಂದ ದಿನಸಿ ಕಿಟ್ ವಿತರಣೆ

ಮೈಸೂರು, ಜೂ.21:-  ಇಂದು  ಸಂಸದ ಪ್ರತಾಪ್ ಸಿಂಹರವರ ಹುಟ್ಟುಹಬ್ಬದ ಪ್ರಯುಕ್ತ ಚಾಮುಂಡೇಶ್ವರಿ ನಗರ ಮಂಡಲದಿಂದ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಸುಮಾರು 150 ಜನರಿಗೆ ದಿನಸಿ ಕಿಟ್ ವಿತರಿಸಲಾಯಿತು. ಕಾರ್ಯಕ್ರಮ ಭಾಗವಹಿಸಿ ಕಿಟ್ ವಿತರಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಚಾಮುಂಡೇಶ್ವರಿ ನಗರ ಮಂಡಲದ ವ್ಯಾಪ್ತಿಯಲ್ಲಿ ಜೂನ್ ತಿಂಗಳಿನಲ್ಲಿಯೇ ಮೂರು ಬಾರಿ ದಿನಸಿ ಕಿಟ್ ತರಕಾರಿ ವಿತರಿಸಿರುವುದನ್ನು ಪ್ರಶಂಸಿಸಿದರು. ಬೇರೆ ಪಕ್ಷದ ಕಾರ್ಯಕರ್ತರು ಟೀಕೆ ಮಾಡುತ್ತಾ ಕಾಲಹರಣ ಮಾಡುತ್ತಿರುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಸೇವೆಯೇ ಸಂಘಟನೆ ಎಂದು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವುದನ್ನು ಸಹ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಅಧ್ಯಕ್ಷ ಬಿ.ಎಂ.ರಘು, ಕ್ಷೇತ್ರದ ಗ್ರಾಮಾಂತರ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್,
ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ರಾಜಮಣಿ,ಮೃಗಾಲಯ ಸದಸ್ಯೆ ಜ್ಯೋತಿ ರೇಚಣ್ಣ, ಉಪಾಧ್ಯಕ್ಷರಾದ ರಾಕೇಶ್ ಭಟ್, ಬಿ.ಸಿ.ಶಶಿಕಾಂತ್, ಗಿರೀಶ್ ದಟ್ಟಗಳ್ಳಿ, ಕಾರ್ಯದರ್ಶಿಗಳಾದ ನಾಗರಾಜ್ ಜನ್ನು, ಚಂದ್ರಕಲಾ,ರಮ್ಯಾ, ಶಿವಕುಮಾರ್,ಚಂದ್ರಶೇಖರ, ನವೀನ್,ಮೋಹನ್ ಗೌಡ, ಗೀತಾ ಮಹೇಶ್, ಕಾಂತರಾಜ ಅರಸು, ಕೆ.ನಾಗೇಶ್, ಭಾಗ್ಯಲತಾ, ರಾಚಪ್ಪಾಜಿ, ಪುನೀತ್ ಗೌಡ, ಪ್ರೀತಮ್, ಶೃತಿ,ವಿನುತಾ, ರೇಖಾ ನಾಗರಾಜ್, ರಾಘವೇಂದ್ರ, ಸಾಗರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

comments

Related Articles

error: