ಮೈಸೂರು

ಎಬಿವಿಪಿ ಸಮಾಜಕ್ಕೆ ಪೂರಕವಾದ ಕೆಲಸವನ್ನೇ ಮಾಡುತ್ತ ಬಂದಿದೆ : ಆಕ್ಸಿಜನ್ ಚಾಲೆಂಜ್ ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಶ್ಲಾಘನೆ

ಮೈಸೂರು,ಜೂ.21:-  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ ಕರ್ನಾಟಕದ ವತಿಯಿಂದ ‘ ಆಕ್ಸಿಜನ್ ಚಾಲೆಂಜ್’ಅಭಿಯಾನದ ಪ್ರಯುಕ್ತ 5 ಲಕ್ಷ ಸಸಿಗಳು ಹಾಗೂ 5 ಲಕ್ಷ ಸಿಡ್ ಬಾಲ್‍ಗಳನ್ನು ನೆಡುವ ಅಭಿಯಾನವನ್ನು ನಡೆಸುತ್ತಿದ್ದು ಅದರಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಮೈಸೂರು ಮತ್ತು ಶಾರದಾ ವಿಲಾಸ ಫಾರ್ಮಸಿ ಕಾಲೇಜು ವತಿಯಿಂದ ವಿಶ್ವಯೋಗ ದಿನಾಚರಣೆ ಹಾಗೂ ಆಕ್ಸಿಜನ್‍ ಚಾಲೆಂಜ್‍ ಅಭಿಯಾನದ  ಕೊನೆ ದಿನದ ಪ್ರಯುಕ್ತ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಚಂದ್ರಶೇಖರ್, ಪ್ರಾಂಶುಪಾಲರಾದ ಹನುಮಂತಾಚಾರ್ ಜೋಶಿ ಹಾಗೂ ವಾಣಿಜ್ಯ ವಿಭಾಗದ ಡೀನ್ ಪ್ರೊ. ಸತ್ಯನಾರಾಯಣ್‍ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಂತರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಚಂದ್ರಶೇಖರ್ ಅವರು ಮಾತನಾಡಿ
ಕಾರ್ಯಕ್ರಮ ಖುಷಿ ನೀಡಿತು.  ಈ ರೀತಿ ಕಾರ್ಯಕ್ರಮಗಳು ಅತ್ಯವಶ್ಯಕ ಎಂದರು. ವಾಣಿಜ್ಯ ವಿಭಾಗದ ಡೀನ್ ಪ್ರೊ. ಸತ್ಯನಾರಾಯಣ್‍ ಅವರು ಮಾತನಾಡಿ ನಮಗೆಲ್ಲರಿಗೂ ತಿಳಿದಿರುವ ಹಾಗೆ ಈಗ ಆಕ್ಸಿಜನ್‍ ಅತ್ಯವಶ್ಯಕ, ಎಬಿವಿಪಿ ಸಮಾಜಕ್ಕೆ ಪೂರಕವಾದ ಕೆಲಸವನ್ನೇ ಮಾಡುತ್ತ ಬಂದಿದೆ, ನನ್ನ ಜೀವನದಲ್ಲಿ ಎಬಿವಿಪಿ ಬಹಳ ಮುಖ್ಯ ಪಾತ್ರ ವಹಿಸಿದೆ, ನಾವುಗಳು ಗಿಡಗಳನ್ನು ಎರಡಷ್ಟು, ಮೂರಷ್ಟು ಬೆಳಸಿ. ಪರಿಸರ ರಕ್ಷಣೆಯನ್ನು ಮಾಡೋಣ ಎಂದರು.

ಈ ಕಾರ್ಯಕ್ರಮದಲ್ಲಿರಾಜ್ಯ ಸಹ ಕಾರ್ಯದರ್ಶಿ ಶ್ರೀರಾಮ, ಜಿಲ್ಲಾ ಸಂಚಾಲಕ್ ಮಲ್ಲಪ್ಪ, ತಾಲೂಕು ಸಂಚಾಲಕ ಶಾಂತಕುಮಾರ್, ನಗರ ಸಹ ಕಾರ್ಯದರ್ಶಿ ಕಿರಣ್, ನಾಗಶ್ರೀ, ಸುಹಾಸ್, ಪವಿತ್ರ,ಕೆವಿನ್ ಮುಂತಾದವರು ಇದ್ದರು.

Leave a Reply

comments

Related Articles

error: