ಮೈಸೂರು

ಭಿಕ್ಷೆ ಪಡೆದ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ; ನಿಗಮ ಮಂಡಳಿಗಳ ಅಧ್ಯಕ್ಷರ ಹೇಳಿಕೆಗೆ ಹೆಚ್ ವಿಶ್ವನಾಥ್ ಅಭಿಮಾನ ಬಳಗದ ಖಂಡನೆ

ಮೈಸೂರು,ಜೂ.22:- ಭಿಕ್ಷೆ ಪಡೆದ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ತಿಳಿಸಿರುವ ನಿಗಮ ಮಂಡಳಿಗಳ ಅಧ್ಯಕ್ಷರ ಹೇಳಿಕೆಯನ್ನು ಅಡಗೂರು ಹೆಚ್.ವಿಶ್ವನಾಥ್ ಅಭಿಮಾನಿ ಬಳಗದ ಅಧ್ಯಕ್ಷ ಎಸ್.ಲೋಕೇಶ್ ಖಂಡಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇವತ್ತಿನ ಭಾರತದ ರಾಜಕಾರಣದಲ್ಲಿ ಎಲ್ಲಾ ಪಕ್ಷದ ನಾಯಕರುಗಳು ತಮ್ಮ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ತರಬೇಕೆಂದು ನಡೆದುಕೊಂಡು ಬಂದಿರುವುದು ಸಹಜವಾಗಿದೆ. ಇವತ್ತು ಯಾವ ರಾಜಕಾರಣಿ ಸಾಚಾ ಇದ್ದಾರೆ ತಿಳಿಸಲಿ. ಹಳ್ಳಿ ಹಕ್ಕಿ ಅಡಗೂರು ವಿಶ್ವನಾಥ್ ಬಗ್ಗೆ ಮೈಸೂರಿನಲ್ಲಿ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರುಗಳು ಹೇಳಿರುವ ಭಿಕ್ಷೆ ಪಡೆದ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂಬ ಹೇಳಿಕೆಗೆ ಅಭಿಮಾನಿಗಳ ಬಳಗದ ಧಿಕ್ಕಾರವಿದೆ ಎಂದರು.

ವಿಶ್ವನಾಥ್ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಅನುಭವವಿದ್ದುದರಿಂದಲೇ ಸಿಎಂ ಯಡಿಯೂರಪ್ಪನವರು ಪರಿಷತ್ ನಲ್ಲಿ ಸ್ಥಾನವನ್ನು ನೀಡಿದರು. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮುಖ್ಯಮಂತ್ರಿಗಳ ಮಗನನ್ನು ಓಲೈಸಿಕೊಳ್ಳಲು ಹತಾಶ ಮನೋಭಾವನೆಯಿಂದ ಈ ರೀತಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: