ಮೈಸೂರು

ಕೇಂದ್ರ ಸರ್ಕಾರದ ಧೋರಣೆ ವಿರೋಧಿಸಿ ಪ್ರತಿಭಟನೆ

ಭಾರತ್ ಅರ್ತ್ ಮೂವರ್ಸ್ ಎಂಪ್ಲಾಯೀಸ್ ಅಸೋಸಿಯೇಷನ್  ತನ್ನ ಶೇ.54 ರಷ್ಟು ಷೇರುಗಳಲ್ಲಿ ಶೇ.26 ನ್ನು ಮಾಲೀಕತ್ವದ ಖಾಸಗಿ ಬಂಡವಾಳಗಾರರಿಗೆ ಕೊಡಲು ಮುಂದಾಗಿರುವ  ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬಿ.ಇ.ಎಂ.ಎಲ್. ನ ಕಾರ್ಮಿಕರು ಬುಧವಾರ ಕಾರ್ಖಾನೆಯ ಮುಖ್ಯದ್ವಾರದಲ್ಲಿ ಕುಳಿತು ಪ್ರತಿಭಟನೆ ಮಾಡಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಈ ಬಗ್ಗೆ ಕಾರ್ಮಿಕರು ಮತ್ತು ಅಧಿಕಾರಿಗಳು ಹೋರಾಟ ಮಾಡಿ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಬಿ.ಇ.ಎಂ.ಎಲ್. ನ ಖಾಸಗೀಕರಣವನ್ನು ವಿರೋಧಿಸಿ ಬಿ.ಇ.ಎಂ.ಎಲ್.ನ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಮತ್ತು ಜಂಟಿ ಕ್ರಿಯಾರಂಗ ಧರಣಿ ನಡೆಸುತ್ತಿದ್ದೇವೆ. ಇಂದಿನಿಂದ ಏ.28 ರವರೆಗೆ ಈ ಧರಣಿ ಮುಂದುವರೆಯಲಿದ್ದು, ಕೇಂದ್ರ ಸರ್ಕಾರ ಬಿ.ಇ.ಎಂ.ಎಲ್ ಅನ್ನು ಖಾಸಗಿಯವರಿಗೆ ಮಾರುವುದರಿಂದ ಹಿಂದೆ ಸರಿಯುವವರೆಗೂ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಹೇಳಿದರು.

ಪ್ರತಿಭಟನೆಯ ನೇತೃತ್ವವನ್ನು ಕಾರ್ಮಿಕ ಸಂಘದ ಅಧ‍್ಯಕ್ಷ ಎಲ್.ಕೆ.ದೇವದಾಸ್ ವಹಿಸಿದ್ದರು.  ಉಪಾಧ್ಯಕ್ಷ ಗೋವಿಂದರೆಡ್ಡಿ, ಪ್ರಧಾನ ಕಾರ್ಯದರ್ಶಿ ಹೆಚ್.ಎ.ನಾಗಶಯನ, ಸಹಕಾರ್ಯದರ್ಶಿ ಹೆಚ್.ಸಿ.ಶಿವಪ್ಪ ಮತ್ತು ಖಜಾಂಚಿ ಚಾಂದ್ ಸಿಂಗ್ ಪಾಲ್ಗೊಂಡಿದ್ದರು. (ಎಲ್.ಜಿ)

Leave a Reply

comments

Related Articles

error: