ಮೈಸೂರು

ಎಂ.ಎಂ.ಕೆ.ಮತ್ತು ಎಸ್.ಡಿ.ಎಂ. ಮಹಿಳಾ ಮಹಾ ವಿದ್ಯಾಲಯ ವತಿಯಿಂದ ಆನ್ ಲೈನ್ ಮೂಲಕ ಯೋಗ ದಿನ ಆಚರಣೆ

ಮೈಸೂರು,ಜೂ.22:-   ಮೈಸೂರಿನ ಎಂ.ಎಂ.ಕೆ.ಮತ್ತು ಎಸ್.ಡಿ.ಎಂ. ಮಹಿಳಾ ಮಹಾ ವಿದ್ಯಾಲಯ ವತಿಯಿಂದ 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು‌  ಆನ್ ಲೈನ್ ಮೂಲಕ  ಆಯೋಜಿಸಲಾಗಿತ್ತು.

ಪ್ರಸಿದ್ಧ ಯೋಗಪಟು ಶ್ರೀಹರಿ ಅವರು ಮೈಸೂರು ಇವರು ಯೋಗದ ಮಹತ್ವವನ್ನು ಕುರಿತು ಮಾತನಾಡಿ ಯೋಗ ವಿಶ್ವಕ್ಕೆ ಭಾರತದ ಕೊಡುಗೆಯಾಗಿದ್ದು ಇಂದಿನ‌ ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಯೋಗವು ಅತ್ಯಂತ ಮಹತ್ವ ಪಡೆದಿದೆ. ನಾವು ದಿನವೂ ಯೋಗವನ್ನು ಮನೆಯ  ಕೆಲಸ ಕಾರ್ಯಗಳಲ್ಲಿಯೇ ಅನುಭವಿಸುತ್ತಿದ್ದು ಆರೋಗ್ಯಯುತ ಬದುಕನ್ನು  ಕಾಣ ಬೇಕಾದರೆ ದಿನಕ್ಕೆ ಒಂದು ಗಂಟೆ ಯೋಗವನ್ನು ಮಾಡಲೇಬೇಕು. ಇಂದಿನ ಒತ್ತಡದ ಬದುಕಿನಲ್ಲಿ ಬದುಕಿನ ಸಾರ್ಥಕ ಅನುಭವಿಸಲು ಯೋಗವನ್ನು ಅನುಸರಿಸಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸಾಯಿನಾಥ ಮಲ್ಲಿಗೆಮಾಡು ಅವರು ಮಾತನಾಡಿ ಇಂದಿನ ಯುವ ಜನತೆಗೆ ಯೋಗ ಬಹಳ ಮುಖ್ಯವಾಗಿದ್ದು, ಭವಿಷ್ಯದ ಭಾರತ ನಿರ್ಮಾಣದಲ್ಲಿ ಯುವಜನರು ಅತಿಮುಖ್ಯವಾದ್ದರಿಂದ ಯೋಗದ ಮೂಲಕ ಸ್ವಾಸ್ಥ್ಯ ಆರೋಗ್ಯಯುತ  ಬದುಕನ್ನು ನಿರ್ಮಾಣ ಮಾಡಿಕೊಳ್ಳಬೇಕು, ಯೋಗದಿನ  ಪ್ರತಿದಿನವೂ ಆಚರಣೆಯಾದಾಗ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಡಾ.ವಿನೋದ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ,   ಮಾಲತಿ ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ಅಧ್ಯಾಪಕ ವೃಂದ, ವಿದ್ಯಾರ್ಥಿನಿಯರು‌ ಭಾಗವಹಿಸಿದ್ದರು.

Leave a Reply

comments

Related Articles

error: