ಮೈಸೂರು

ಸಂಸದ ಪ್ರತಾಪ್ ಸಿಂಹ ಹುಟ್ಟುಹಬ್ಬದ ಪ್ರಯುಕ್ತ ಮಾಸ್ಕ್, ಸ್ಯಾನಿಟೈಸರ್ ವಿತರಣೆ

ಮೈಸೂರು,ಜೂ.23:-  ಮೈಸೂರು ಕೊಡಗು ಲೋಕಸಭಾ ಸಂಸದರು ಪ್ರತಾಪ್ ಸಿಂಹ ಅವರ ಹುಟ್ಟುಹಬ್ಬದ ಪ್ರಯುಕ್ತ 100 ಮಾಸ್ಕ್ 100 ಸಾನಿಟೈಸರ್ ನ್ನು ಗಣೇಶ್ ನಗರ ವಾರ್ಡ್ ನಂಬರ್ 15 ರಲ್ಲಿ ಪ್ರತಾಪ್ ಸಿಂಹ ಅಭಿಮಾನಿ ಬಳಗ ವತಿಯಿಂದ ವಿತರಿಸಲಾಗಿದ್ದು, ನರಸಿಂಹರಾಜ ವಿಧಾನಸಭಾ ಕ್ಷೇತ್ರ ಮಾಜಿ ಯುವಮೋರ್ಚಾ ಅಧ್ಯಕ್ಷರಾದ ನಾಣಿಗೌಡ ವಿತರಿಸಿದರು.

ಬಳಿಕ ಮಾತನಾಡಿದ ಅವರು ಕೋವಿಡ್ ಸಂದರ್ಭದಲ್ಲಿ ಪ್ರತಾಪ್ ಸಿಂಹ ಅವರು ಹಗಲು ರಾತ್ರಿ ಎನ್ನದೆ ನಿರಂತರ ಸೋಂಕಿತರ ಸಂಪರ್ಕದಲ್ಲಿ ಇದ್ದು ಅವರಿಗೆ ನೀಡಿದಂತಹ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉಸ್ತುವಾರಿ ಸಚಿವರು, ಸಂಸದರಿಗೆ ಆಕ್ಸಿಜನ್ ಮತ್ತು ರೆಮ್ಡಿಸಿವಿರ್ ನ ಟಾಸ್ಕ್ ಫೋರ್ಸ್ ಜವಾಬ್ದಾರಿ ನೀಡುವ ಮೊದಲು ಬಹಳ ತೊಂದರೆಗಳಿದ್ದವು. ರೆಮ್ಡಿಸಿವರ್ ಸಂಗ್ರಹ ವಿದ್ದರೂ ಅದನ್ನು ವ್ಯವಸ್ಥಿತವಾಗಿ ನೀಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದರು. ಅದನ್ನು ಸರಿಪಡಿಸಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದಾರೆ.  ಇಂಥ ಯುವ ಉತ್ಸಾಹ ಹೊಂದಿರುವ ಸಂಸದರಿಗೆ ಪ್ರಧಾನಿಗಳು ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ನೀಡುವ ಮೂಲಕ ಇವರನ್ನು ಉತ್ತಮ ವಾಗಿ ಕಾರ್ಯನಿರ್ವಹಿಸಲು ಬಳಸಿಕೊಳ್ಳ ಬೇಕೆಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: