ಮೈಸೂರು

ಶ್ಯಾಮ್ ಪ್ರಸಾದ್ ಮುಖರ್ಜಿ ಜನ್ಮದಿನ,ಪುಣ್ಯತಿಥಿ ಪ್ರಯುಕ್ತ ಇಂದಿನಿಂದ ಜು.6ರವರೆಗೆ ಬಿಜೆಪಿಯಿಂದ ವಿವಿಧ ಕಾರ್ಯಕ್ರಮ : ಟಿ.ಎಸ್.ಶ್ರೀವತ್ಸ ಮಾಹಿತಿ

ಮೈಸೂರು,ಜೂ.23:- ಭಾರತೀಯ ಜನಸಂಘದ ಸ್ಥಾಪಕಾಧ್ಯಕ್ಷ ಶ್ಯಾಂ ಪ್ರಸಾದ್ ಮುಖರ್ಜಿಯವರ ಪುಣ್ಯತಿಥಿ ಮತ್ತು ಜನ್ಮದಿನದ ಪ್ರಯುಕ್ತ ನಗರದಲ್ಲಿ ಇಂದಿನಿಂದ ವಿವಿಧ ಕಾರ್ಯಕ್ರಮಗಳನ್ನು ಬಿಜೆಪಿ ಹಮ್ಮಿಕೊಂಡಿದೆ ಎಂದು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ತಿಳಿಸಿದರು.
ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ಬಿಜೆಪಿ ರಾಷ್ಟ್ರೀಯ ಘಟಕ ಇವತ್ತಿಂದ ಜುಲೈವರೆಗೆ ಕಾರ್ಯಕ್ರಮ ಮಾಡಲು ಒಂದಷ್ಟು ಯೋಜನೆಯನ್ನು ಕಳುಹಿಸಿದೆ ಎಂದು ತಿಳಿಸಿದರು. ಜೂ.21ಅಂತರರಾಷ್ಟ್ರೀಯ ಯೋಗ ದಿನವಾಗಿತ್ತು. ಅಂದು ಯೋಗ ಕಾರ್ಯಕ್ರಮದ ಪ್ರಯುಕ್ತ ಮನೆಯಲ್ಲಿಯೇ ಯೋಗ ಮಾಡಿ, ಫೋಟೋ ಕಳುಹಿಸಿ ಎಂದು ಹೇಳಲಾಗಿತ್ತು. ಲಿಂಕ್ ಕಳುಹಿಸಿಕೊಟ್ಟು ಅದಕ್ಕೆ ಫೊಟೋ ಹಾಕಲು ಹೇಳಲಾಗಿತ್ತು. 387ಬೂತ್ ಗಳಲ್ಲಿಯೇ ಕಾರ್ಯಕ್ರಮಗಳನ್ನು ಕಾರ್ಯಕರ್ತರು ಮಾಡಿದ್ದಾರೆ. 1088 ಕಾರ್ಯಕರ್ತರು ಈ ಯೋಗದಿನದಂದು ಭಾಗವಹಿಸಿದ ಫೋಟೋ ಹಾಕಿರುವುದು ವಿಶೇಷ. ನಾವು ಒಟ್ಟಾಗಿ ಮಾಡಿ ಅಂದರೂ ಈ ಸಂಖ್ಯೆಯಲ್ಲಿ ಆಗುತ್ತಿರಲಿಲ್ಲವೇನೋ ಎಂದರು.
ನಗರ ಪಾಲಿಕೆ ಸದಸ್ಯರು ಐದಾರು ಮಂದಿ ಯೋಗಾಭ್ಯಾಸ ಮಾಡಿದ್ದು, ಕಾರ್ಯಕರ್ತರು ಭಾಗವಹಿಸಿರುವುದು ವಿಶೇಷವಾಗಿದೆ ಎಂದರು. ಜೂ.23ರಿಂದ ಜು.6ರವರೆಗೆ ಅನೇಕ ಕಾರ್ಯಕ್ರಮಗಳನ್ನು ಬಿಜೆಪಿ ರಾಷ್ಟ್ರೀಯ ಘಟಕ ನೀಡಿದೆ. ಭಾರತೀಯ ಜನಸಂಘದ ಸ್ಥಾಪಕಾಧ್ಯಕ್ಷ ಶ್ಯಾಂ ಪ್ರಸಾದ್ ಮುಖರ್ಜಿಯವರ ಪುಣ್ಯತಿಥಿ ಮತ್ತು ಜು.6ಹುಟ್ಟಿದ ದಿನ. ಪ್ರತಿಯೊಂದು ಬೂತ್ ಲ್ಲಿ 25ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಾರ್ಡ್ ಗಳಲ್ಲಿ ಬರುವ ಎಲ್ಲ ಬೂತ್ ಗಳಲ್ಲಿ 25 ಸಸಿ ನೆಡಬೇಕೆನ್ನುವ ಮತ್ತು ಅದರ ಪಾಲನೆ-ಪೋಷಣೆ ಮಾಡಬೇಕೆನ್ನುವ ಮನವಿ ಮಾಡಲಾಗಿದೆ. ರೈತ ಮೋರ್ಚಾದ ಅಧ್ಯಕ್ಷರ ನೇತೃತ್ವದಲ್ಲಿ ಉಸ್ತುವಾರಿಗಳನ್ನು ಅವರಿಗೇ ನೀಡಿದ್ದೇವೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿಂದು ಬೆಳಿಗ್ಗೆ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ಲಭಿಸಿದೆ. ಸಾಯಂಕಾಲ ಶಾಸಕ ರಾಮದಾಸ್ ಅವರು ಎರಡು ಮೂರು ಕಡೆ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನಿಡಲಿದ್ದಾರೆಂದು ತಿಳಿಸಿದರು.
ಜು.6ರವರೆಗೆ ಎಷ್ಟು ಬೂತ್ ಗಳಲ್ಲಿ ಮಾಡಲು ಸಾಧ್ಯವಿದೆ ಎಂಬುದನ್ನು ತಿಳಿಸಿಕೊಟ್ಟಿದ್ದೇವೆ. ಇನ್ನು ಜೂ.25 ತುರ್ತು ಪರಿಸ್ಥಿತಿ ಹೇರಿದ ದಿವಸ. ಯಾಕಾಗಿ ತುರ್ತು ಪರಿಸ್ಥಿತಿ ತಂದರು, ಆ ಸಂದರ್ಭದಲ್ಲಿ ಏನೆಲ್ಲ ಕಷ್ಟಗಳನ್ನು ಎದುರಿಸಬೇಕಾಯಿತು ಎಂಬುದನ್ನು ಕಾರ್ಯಕರ್ತರಿಗೆ ತಿಳಿಸುವ ಸಣ್ಣ ಪ್ರಯತ್ನ ಮಾಡಲಾಗುವುದು. ಹಿರಿಯರಾದ ಎನ್.ಆರ್.ಚಂದ್ರಶೇಖರ್, ಮಧುಸೂದನ್, ತೋಂಟದಾರ್ಯ ಇವರೆಲ್ಲ ಜೈಲಲ್ಲಿ ಇದ್ದಂತಹವರು. ತುರ್ತು ಪರಿಸ್ಥಿತಿಯಲ್ಲಿನ ಸಮಯದಲ್ಲಿ ಜೈಲಲ್ಲಿ ಇದ್ದ ನಂತರ ಅನುಭವಿಸಿದ ತೊಂದರೆಗಳನ್ನು ತಿಳಿಸಿಕೊಡಲಾಗುವುದೆಂದು ತಿಳಿಸಿದರು. ಕೆರೆಗಳು, ಬಾವಿಗಳು ಇತರ ಜಲಮೂಲಗಳ ಬಗ್ಗೆ ವಿಶೆಷ ಗಮನ ಹರಿಸಿ ಕ್ಲೀನ್ ಇಂಡಿಯಾ, ಹೆಲ್ದಿ ಇಂಡಿಯಾ ಅಡಿಯಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನವನ್ನು ಜೂ. 23ರಿಂದ ಜು.6ವರೆಗೆ ಹಮ್ಮಿಕೊಳ್ಳಲಾಗುವುದು ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: