ಮೈಸೂರು

ದತ್ತ ಸೇನೆ ವತಿಯಿಂದ ದಿನಸಿ ಕಿಟ್ ವಿತರಣೆ

ಮೈಸೂರು, ಜೂ.23:- ನಗರದ ದತ್ತಸೇನೆ ವತಿಯಿಂದ ಕೃಷ್ಣಮೂರ್ತಿ ಬಡಾವಣೆಯಲ್ಲಿ ಮನೆ ಮನೆಗೆ ತೆರಳಿ ಅವಧೂತ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 79ನೇ ವರ್ಧಂತಿಯ ಅಂಗವಾಗಿ ಅಗತ್ಯವಿರುವ ನೂರಕ್ಕೂ ಅಧಿಕ ವಿಪ್ರ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.
ಪಡಿತರ ಚೀಲವನ್ನು ವಿತರಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಆರ್.ಎಸ್.ಸತ್ಯನಾರಾಯಣ ಇಂದು ಕೊರೊನಾ 2ನೇ ಅಲೆ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಹರಡಿದ್ದು, ಇದರಿಂದ ನಾಗರೀಕರು ಕೆಲಸ ಹಾಗೂ ಸಂಪಳವಿಲ್ಲದೇ ಬಹಳ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಂತಹ ಕುಟುಂಬಗಳನ್ನು ಗುರುತಿಸಿ ನಮ್ಮ ಕೈಲಾದ ಸಹಾಯವನ್ನು ಸಂಸ್ಥೆಯ ವತಿಯಿಂದ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಸಾವಿರಕ್ಕೂ ಅಧಿಕ ದಿನಸಿ ಕಿಟ್‍ಗಳನ್ನು ವಿತರಿಸಿದ್ದೇವೆ ಎಂದು ಅವರು ತಿಳಿಸಿದರು. ಕಳೆದ ಬಾರಿ ಬೆಟ್ಟದಪುರ ಸಂಕೇತಿ ಸಂಘದ ಸಂಯುಕ್ತಾಶ್ರಯದಲ್ಲಿ 300ಕ್ಕೂ ಅಧಿಕ ಕಿಟ್‍ಗಳನ್ನು ವಿತರಿಸಿದ್ದೇವೆ ಎಂದು ತಿಳಿಸಿದರು. ಲಾಕ್‍ ಡೌನ್ ಪ್ರಕ್ರಿಯೆ ಸಂಪೂರ್ಣವಾಗಿ ಅನ್‍ ಲಾಕ್ ಆಗಿ ಸಾರ್ವಜನಿಕರು ಸಹಜ ಸ್ಥಿತಿಗೆ ಬರುವವರೆಗೂ ಈ ಕಾರ್ಯವನ್ನು ಮುಂದುವರೆಸುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೆಂಕಟೇಶ್, ಗಧಾದರ್, ಶ್ರೀನಿಧಿ ಮುಂತಾದವರು ಉಪಸ್ಥಿತರಿದ್ದರು.

Leave a Reply

comments

Related Articles

error: