ಮೈಸೂರು

ಗಿರಿಜಾ ಕಲ್ಯಾಣ ಮಹೋತ್ಸವ : ಜೂ.26ರಿಂದ ಜು.3ರವರೆಗೆ ಶ್ರೀ ಕಂಠೇಶ್ವರ ದೇವಸ್ಥಾನ ಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ

ಮೈಸೂರು, ಜೂ.23:- ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಜೂ.26ರಿಂದ ಜು.3ರವರೆಗೆ ವಾರ್ಷಿಕವಾಗಿ ಶ್ರೀಗಿರಿಜಾ ಕಲ್ಯಾಣ ಮಹೋತ್ಸವ ನಡೆಯಲಿದೆ.
ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ರಿಗೆ ಜೂ.26ರಿಂದ ಜು.3ರವರೆಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.
ಈ ದಿನಗಳಂದು ಶ್ರೀಕಂಠೇಶ್ವರ ಸ್ವಾಮಿಯವರ ಗಿರಿಜಾ ಕಲ್ಯಾಣ ಮಹೋತ್ಸವದ ಧಾರ್ಮಿಕ ಆಚರಣೆಗಳನ್ನು ದೇವಾಲಯದ ಸಾಂಪ್ರದಾಯಕ್ಕೆ ಅನುಗುಣವಾಗಿ ದೇವಾಲಯಕ್ಕೆ ಮಾತ್ರ ಸೀಮಿತ ಗೊಳಿಸಿ ಆಚರಿಸಲು ಆದೇಶಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: