ಮೈಸೂರು

ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನದ ಹಿನ್ನೆಲೆ : ಚಾಮುಂಡೇಶ್ವರಿ ನಗರ ಮಂಡಲ ವತಿಯಿಂದ ವೃಕ್ಷಾರೋಹಣಕ್ಕೆ ಚಾಲನೆ

ಮೈಸೂರು, ಜೂ.23:-ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮಪ್ರಸಾದ್‌ ಮುಖರ್ಜಿ ಅವರ ಬಲಿದಾನ ದಿನದ ಅಂಗವಾಗಿ ಪ್ರತಿ ವಾರ್ಡ್ ಮತ್ತು ಬೂತ್ ಮಟ್ಟದಲ್ಲೂ ಪ್ರತಿ ಕಾರ್ಯಕರ್ತರು ಸಸಿ ನೆಡುವ ಅಭಿಯಾನ “ವೃಕ್ಷಾರೋಹಣ” ಕಾರ್ಯಕ್ರಮಕ್ಕೆ ಚಾಮುಂಡೇಶ್ವರಿ ನಗರ ಮಂಡಲದ ವ್ಯಾಪ್ತಿಯ ಬೋಗಾದಿ ಉತ್ತರ ಬಡಾವಣೆಯ ಗಣಪತಿ ದೇವಸ್ಥಾನ ಹತ್ತಿರದ ಹೈಟೆನ್ಷನ್ ಉದ್ಯಾನವನದಲ್ಲಿ ಚಾಲನೆ ನೀಡಲಾಯಿತು.

ಮೈಸೂರು ನಗರ ಅಧ್ಯಕ್ಷರಾದ ಟಿ.ಎಸ್. ಶ್ರೀವತ್ಸರವರು ಶಾಮ್ ಪ್ರಸಾದ್ ಮುಖರ್ಜಿರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗಿಡ ನೆಡುವ ಮೂಲಕ ಚಾಲನೆ ನೀಡಿದರು ನಂತರ ಮಾತನಾಡಿ “ಶ್ಯಾಮಪ್ರಸಾದ್ ಮುಖರ್ಜಿರವರು ದೇಶದ ಕೈಗಾರಿಕಾ ಮಂತ್ರಿಯಾಗಿ ಹೆಚ್.ಎ.ಎಲ್, ಬೆಮೆಲ್ ನಂಥ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿದರು. 1947ರಲ್ಲಿ ಭಾರತ ಇಬ್ಬಾಗವಾದ ನಂತರ ದೇಶದ ಬಗ್ಗೆ ಸ್ಪಷ್ಟ ಕಲ್ಪನೆಯನ್ನು ಹೊಂದಿದ್ದರು. ಆದರೆ ಕಾಂಗ್ರೆಸ್ಸಿನ ತುಷ್ಟೀಕರಣ ಹಾಗೂ ನೆಹರುರವರ ನೀತಿಯಿಂದ ಬೇಸರಗೊಂಡರು, ಕಾಶ್ಮೀರಕ್ಕೆ ವಿಶೇಷ ಕಾನೂನು 370 ಬೇಡವೆಂದು ಸಂಪುಟದಲ್ಲಿ ಪ್ರತಿಪಾದಿಸಿದ್ದರು. ಒಂದು ದೇಶಕ್ಕೆ ಎರಡು ಧ್ವಜ, ಎರಡು ಸಂವಿಧಾನ ಎರಡು ಪ್ರಧಾನಿ ಬೇಡವೆಂದು “ನಹಿ ಚಲೇಗಾ, ನಹಿ ಚಲೇಗಾ” ಎಂದು ಘೋಷಣೆ ಹಾಕಿದ್ದು ಭಾರಿ ಸುದ್ದಿಯಾಯಿತು. ಇದೇ ಹೋರಾಟದಲ್ಲಿ ಜಮ್ಮು ಜೈಲಿನಲ್ಲಿ ಅವರ ಸಾವು ಇನ್ನೂ ನಿಗೂಢ. ಇಂದಿಗೂ ಅವರ ಸಾವಿನ ತನಿಖೆಯಾಗಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವೃಕ್ಷಾರೋಹಣ ಕಾರ್ಯಕ್ರಮದ ನಗರ ಸಂಚಾಲಕರು ಹಾಗೂ ರೈತ ಮೋರ್ಚಾದ ನಗರಾಧ್ಯಕ್ಷ ದೇವರಾಜ್ ಮಾತನಾಡಿ ಶ್ಯಾಮಪ್ರಸಾದ್ ಮುಖರ್ಜಿರವರ ಪುಣ್ಯಸ್ಮರಣೆಯಾದ ಜೂನ್ 23, ಈ ದಿನದಿಂದ ಆರಂಭವಾಗಿ ಅವರ ಹುಟ್ಟುಹಬ್ಬದ ದಿನವಾದ ಜುಲೈ 6ರವರೆಗೆ ನಗರ 1084ಕ್ಕೂ ಅಧಿಕ ಬೂತುಗಳಲ್ಲಿ ತಲಾ 25 ಗಿಡಗಳಂತೆ 25000 ಗಿಡಗಳನ್ನು ನೆಡುವ ಕಾರ್ಯಕ್ರಮ ಇದಾಗಿದೆ ಎಂದು ವಿವರಿಸಿದರು.

ಮಂಡಲದ ಅಧ್ಯಕ್ಷರಾದ ಬಿ.ಎಂ.ರಘು, ಮೈಸೂರು ನಗರ ಪ್ರದಾನ ಕಾರ್ಯದರ್ಶಿಗಳಾದ ವಾಣೀಶ್ ಕುಮಾರ್, ಎಚ್ ಜಿ ಗಿರಿಧರ್, ಮಂಡಲ ಪ್ರದಾನ ಕಾರ್ಯದರ್ಶಿ ಎಚ್ ಜಿ ರಾಜಮಣಿ, ಈರೇಗೌಡ, ನಗರಪಾಲಿಕೆ ಸದಸ್ಯರಾದ ಲಕ್ಷ್ಮಿ ಕಿರಣ್, ಕೆ.ಜೆ.ರಮೇಶ್, ಮಂಡಲ ಉಪಾಧ್ಯಕ್ಷರಾದ ರಾಕೇಶ್ ಭಟ್, ಬಿ ಸಿ ಶಶಿಕಾಂತ್, ಗಿರೀಶ್ ದಟ್ಟಗಳ್ಳಿ, ಮೃಗಾಲಯ ಪ್ರಾಧಿಕಾರದ ಸದಸ್ಯೆ ಜ್ಯೋತಿ ರೇಚಣ್ಣ, ಮುಖಂಡರಾದ ಟಿ ಎಸ್ ರವಿಕುಮಾರ್, ರೇವಣ್ಣ, ನಗರ ವಿವಿಧ ಮೋರ್ಚಾ ಪದಾಧಿಕಾರಿಗಳಾದ ಕಾರ್ತಿಕ್ ಗೌಡ, ಸಂತೋಷ್ ಪೌಲ್, ಭರತ್, ಯುವ ಮೋರ್ಚಾದ ಎಸ್.ಮಧು, ಕಾಂತರಾಜ ಅರಸು, ರಾಚಪ್ಪಾಜಿ, ಗೀತಾ ಮಹೇಶ್, ಶಿವಕುಮಾರ್, ಚಂದ್ರಶೇಖರ್ ಸ್ವಾಮಿ, ನವೀನ್, ರಮ್ಯಾ ಪುನೀತ್, ಶ್ರುತಿ ಪ್ರೀತಂ, ರೋಸಲಿನ್, ರಾಘವೇಂದ್ರಗೌಡ, ಸಾಗರ್ ರಜಪೂತ್, ಶಿವು, ಅನೂಪ್, ಭರತ್, ವಿನಯ್ ಭಾಗವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: