ಮೈಸೂರು

ಸ್ಪಂದನ ಸಂಸ್ಥೆಯ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಮೈಸೂರು,ಜೂ.23-ಅಂತಾರಾಷ್ಟ್ರೀಯ ಯೋಗ ದಿನವನ್ನು ಸ್ಪಂದನ ಸಂಸ್ಥೆಯ ವತಿಯಿಂದ ಆಚರಿಸಲಾಯಿತು. ಈ ಬಾರಿ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಪಂದನ ಸಂಸ್ಥೆಯ ಸದಸ್ಯರುಗಳು ಮನೆಯಲ್ಲೇ ಯೋಗ ಮಾಡುವ ಮೂಲಕ ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಎಂ.ಜಯಶಂಕರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಕೆ.ಆರ್.ಕುಮಾರಸ್ವಾಮಿ, ಡಾ.ಪ್ರಭುಲಿಂಗಸ್ವಮಿ, ಡಾ.ಪಲ್ಲವಿ ಪ್ರಭು, ಪ್ರೊ.ನರಸಿಂಹ ಮೂರ್ತಿ, ಡಾ.ರೇಖಾ, ಎಸ್.ನಿಶ್ಚಿತಾ, ಮಕ್ಕಳಾದ ಎಸ್.ತಕ್ಷಯ್, ಸನ್ನಿಧಿ, ನಿರಂಜನ್ ಎನ್.ದಳಪತಿ, ಅಮೆರಿಕಾದಿಂದ ಪಿಂಕಿ ದೀಪು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಯೋಗ ಪಟುಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಡವರಿಗೆ ಬಟ್ಟೆ ವಿತರಿಸಲಾಯಿತು. (ಎಂ.ಎನ್)

Leave a Reply

comments

Related Articles

error: