ಮೈಸೂರು

ಸಮಾಜಶಾಸ್ತ್ರಜ್ಞರ ಚಿಂತನೆಗಳು ಸಾರ್ವಕಾಲಿಕ: ಪ್ರೊ.ಆರ್.ಇಂದಿರಾ

ಮೈಸೂರು,ಜೂ.23-ಸಮಾಜಶಾಸ್ತ್ರ ಚಿಂತಕರು ಮತ್ತು ತಜ್ಞರ ಚಿಂತನೆಗಳು ಸಾರ್ವಕಾಲಿಕವಾದ್ದದು ಎಂದು ಇಂಡಿಯನ್ ಸೋಶಿಯಲಾಜಿಕಲ್ ಸೋಸೈಟಿ ನಿಕಟ ಪೂರ್ವ ಅಧ್ಯಕ್ಷೆ ಪ್ರೊ.ಆರ್.ಇಂದಿರಾ ಹೇಳಿದರು.

ಮಹಾರಾಜ ಕಾಲೇಜು ಮತ್ತು ಟೇರಿಷಿಯನ್ ಕಾಲೇಜಿನ ಸಮಾಜಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ‘ಸಮಾಜಶಾಸ್ತ್ರ ಚಿಂತಕರು ಹಾಗೂ ಸೈದ್ಧಾಂತಿಕ ದೃಷ್ಟಿಕೋನಗಳು’ ಕುರಿತು ಆಯೋಜಿಸಿರುವ ಆರು ದಿನಗಳ ವೆಬಿನಾರ್ ಉಪನ್ಯಾಸ ಮಾಲಿಕೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಾಜ ಚಿಂತಕರ ಚಿಂತನೆ, ದೃಷ್ಟಿಕೋನ ಹಾಗೂ ಸಿದ್ಧಾಂತಗಳು ಎಲ್ಲಾ ಕಾಲಕ್ಕೂ ಸಲ್ಲುವಂತದ್ದು, 18-19 ಶತಮಾನದ ಅವರ ಸಾಮಾಜಿಕ ಕಳಕಳಿ, ಪರಿವರ್ತನೆಗಳು, ವಿದ್ಯಾಮಾನಗಳು, ಸಮಸ್ಯೆಗಳು ಹಾಗೂ ಸಾಮಾಜಿಕ ಅಂತರ್‌ಕ್ರಿಯೆ ಸಂಬಂಧಿಸಿದ ಚಿಂತನೆಗಳು ಪ್ರಸ್ತುತ ಕಾಲಕ್ಕೂ ಹೆಚ್ಚು ಅಗತ್ಯವಾಗಿದೆ ಎಂದರು.

ಪ್ರಾಂಶುಪಾಲೆ ಪ್ರೊ.ಅನಿಟ ವಿಮ್ಲ ಬ್ರಾಗ್ಸ್‌,  ಟೇರಿಷಿಯನ್ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾ ಅಲ್ಮೇಡಾ,  ವಿಭಾಗದ ಮುಖ್ಯಸ್ಥ ಡಾ.ಎಂ.ಮಂಜುಳಾ, ಕಾರ್ಯಕ್ರಮದ ಸಂಯೋಜಕಿ ಸಹ ಪ್ರಾಧ್ಯಾಕಿ ಡಾ.ರೇಖಾ ಜಾಧವ,  ಕಾರ್ಯಕ್ರಮ ಸಂಯೋಜಕ ಕಾರ್ಯದರ್ಶಿ ಮತ್ತು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಆರ್.ಪ್ರಫುಲ್ಲಾ, ಪ್ರಾಧ್ಯಾಪಕ ಪ್ರೊ.ಆರ್.ಗೋಪಾಲ್‌ರಾಜು,ಉಪನ್ಯಾಸಕಾದ ಬಿ.ಎಸ್.ದಿನಮಣಿ, ಕೆ.ಆರ್.ಮುರಳೀಧರ್ ಸೇರಿದಂತೆ ಮಹಾರಾಜ ಮತ್ತು ಟೇರಿಷಿಯನ್ ಕಾಲೇಜಿನ ಉಪನ್ಯಾಸಕರು ಇದ್ದರು.

ಜೂ.23 ರಂದು ಡಾ.ಅಶ್ವಿನ್ ಪಾಟೀಲ್ ಅವರು ಸಮಾಜಶಾಸ್ತ್ರೀಯ ಚಿಂತಕ ಮ್ಯಾಕ್ಸ್‌ವೇವರ್ ಕುರಿತು, ಜೂ.24 ರಂದು ಡಾ.ಜಯಪಾಲ್ ಅವರ ಕಾರ್ಲ್ ಮಾರ್ಕ್ಸ್ ಸೈದ್ದಾಂತಿಕ ದೃಷ್ಟಿಕೋನಗಳು, ಜೂ.25 ರಂದು ಪ್ರೊ.ಗ್ರೇಸಿ ವಾಸಂತಿ ಅವರು ಸಮಾಜಶಾಸ್ತ್ರಕ್ಕೆ ಯಮೈಲ್ ಡಾರ್ಖಿಂ ಅವರ ಕೊಡುಗೆಗಳು ಕುರಿತು, ಜೂ.26 ರಂದು ಡಾ.ಸಂತೋಷ್ ನಾಯಕ್, ಹರ್ಬಟ್ ಸ್ಪೆನ್ಸರ್ ಸೈದ್ಧಾಂತಿಕ ದೃಷ್ಟಿಕೋನಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 2ರಿಂದ 3 ಸಮಯದಲ್ಲಿ ನಡೆಯುವ ವೆಬಿನಾರ್‌ನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಭಾಗವಹಿಸಬಹುದು. ಎಲ್ಲಾ ದಿನ ಭಾಗವಹಿಸಿದವರಿಗೆ ಇ-ಪ್ರಮಾಣ ಪತ್ರ ನೀಡಲಾಗುತ್ತದೆ. https://meet.google.com/yqv-jpnk-nnd ಈ ಲಿಂಕ್ ಮೂಲಕ ವೆಬಿನಾರ್ ನಲ್ಲಿ ಭಾಗವಹಿಸಬಹುದಾಗಿದೆ. (ಎಂ.ಎನ್)

Leave a Reply

comments

Related Articles

error: