ಕ್ರೀಡೆದೇಶಪ್ರಮುಖ ಸುದ್ದಿ

 ಮಿಜೋರಾಂನಿಂದ ಒಲಿಂಪಿಕ್ಸ್‌ಗೆ ಪ್ರವೇಶಿಸಿದ ಮೊದಲ ಆಟಗಾರ್ತಿ  ಹೆಗ್ಗಳಿಕೆಗೆ ಪಾತ್ರರಾದ ಲಾಲ್‌ರೆಮ್ಸಿಯಾಮಿ  

ದೇಶ(ನವದೆಹಲಿ)ಜೂ.24:- ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದ ಮತ್ತು ಮಿಜೋರಾಂ ರಾಜ್ಯದ ಮೊದಲ ಮಹಿಳಾ ಒಲಿಂಪಿಯನ್ ಆಗಿದ್ದಕ್ಕಾಗಿ ಮಿಜೋರಾಂ ಸರ್ಕಾರ ಯುವ ಹಾಕಿ ತಾರೆ ಲಾಲ್ ರೆಮ್ಸಿಯಾಮಿಗೆ 25 ಲಕ್ಷ ರೂ ಬಹುಮಾನ ಘೋಷಿಸಿದೆ.

ಅಸ್ಸಾಂ ಗಡಿಯ ಸಮೀಪವಿರುವ ಮಿಜೋರಾಂನ ಕೋಲಾಸಿಬ್ ಪಟ್ಟಣದ 21 ವರ್ಷದ ತಾರೆ 16 ಸದಸ್ಯರ ಭಾರತೀಯ ಮಹಿಳಾ ಹಾಕಿ ಒಲಿಂಪಿಕ್ ತಂಡದಲ್ಲಿ ಆಯ್ಕೆಯಾಗಿರುವ ಎಂಟು ಹೊಸ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಲಾಲ್ ರೆಮ್ಸಿಯಾಮಿಗೆ ರಾಜ್ಯ ಸರ್ಕಾರ 25 ಲಕ್ಷ ರೂ.ಗಳ ಬಹುಮಾನ ನೀಡಲಿದೆ ಎಂದು ಮಿಜೋರಾಂ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಬುಧವಾರ ಪ್ರಕಟಿಸಿದ್ದಾರೆ. ಒಲಿಂಪಿಕ್ಸ್‌ ನ  ಬರ್ತ್ ಬುಕ್ ನಲ್ಲಿ  ಕಾಯ್ದಿರಿಸಿದ ಮೆಚ್ಚುಗೆಯ ಸಂಕೇತವಾಗಿ 25 ಲಕ್ಷ ಬಹುಮಾನ ನೀಡಲಾಗುತ್ತಿದೆ. ಈ ಐತಿಹಾಸಿಕ ಪ್ರಕಟಣೆ ಅಂತರರಾಷ್ಟ್ರೀಯ ಒಲಿಂಪಿಕ್ ದಿನಾಚರಣೆ ಜೊತೆ  ಸೇರಿದೆ.

ಐಜ್ವಾಲ್‌ ನ ಮುಖ್ಯಮಂತ್ರಿಗಳ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ  ಜೋರಾಮ್‌ ಥಂಗಾ ಅವರು   10 ಲಕ್ಷ ರೂ.ಗಳ ಬಹುಮಾನದ ಮೊದಲ ಕಂತನ್ನು ಲಾಲ್‌ ರೆಮ್ಸಿಯಾಮಿಯ ತಾಯಿ ಲಾಲ್‌ ಜರ್ಮವಿ ಅವರಿಗೆ ಹಸ್ತಾಂತರಿಸಲಿದ್ದಾರೆಂದು ರಾಯ್ಟೆ ತಿಳಿಸಿದ್ದಾರೆ. ಉಳಿದ 15 ಲಕ್ಷ ರೂ.ಗಳನ್ನು ಒಲಿಂಪಿಕ್ ಕ್ರೀಡಾಕೂಟದ ನಂತರ ವೈಯುಕ್ತಿಕವಾಗಿ ಆಟಗಾರ್ತಿಗೆ ಹಸ್ತಾಂತರಿಸಲಾಗುವುದು ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: