ದೇಶಪ್ರಮುಖ ಸುದ್ದಿಮನರಂಜನೆ

ಬ್ರೈನ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಅಭಿಮಾನಿಯ ಆಸೆ ನೆರವೇರಿಸಿದ ನಟ ಕಮಲ್ ಹಾಸನ್  : ವಿಡಿಯೋ ವೈರಲ್

 ದೇಶ(ಚೆನ್ನೈ)ಜೂ.24:- ಚಲನಚಿತ್ರ ನಿರ್ಮಾಪಕ-ನಟ ಕಮಲ್ ಹಾಸನ್ ತಮ್ಮ ಅಭಿಮಾನಿಗಳನ್ನು ಮೆಚ್ಚಿಸುವುದರಲ್ಲಿ ಎಂದಿಗೂ ಹಿಂದೆ ಬೀಳುವುದಿಲ್ಲ. ಅವರ ವೈರಲ್ ಆಗುತ್ತಿರುವ ವಿಡಿಯೋ ಇದಕ್ಕೆ ಸಾಕ್ಷಿಯಾಗಿದೆ.

ನಟ ಕಮಲ್ ಹಾಸನ್ ಅವರ ಅಭಿಮಾನಿ ಸಾಕೇತ್ ಎಂಬವರಿಗೆ ಇತ್ತೀಚೆಗೆ   ಮೆದುಳಿನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಅವರು ಕೆಲವು ಸಮಯದಿಂದ 3 ನೇ ಹಂತದ ಮೆದುಳಿನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದು,  ಕಮಲ್ ಹಾಸನ್ ಅವರೊಂದಿಗೆ ಮಾತನಾಡುವ ಇಚ್ಛೆ ವ್ಯಕ್ತಪಡಿಸಿದ್ದರು.

ನಟ ಕಮಲ್ ಹಾಸನ್ ಅವರಿಗೆ ಈ ವಿಷಯ ತಿಳಿದಾಗ ಅವರು ತಮ್ಮ ಅಭಿಮಾನಿ ಸಾಕೇತ್ ಅವರೊಂದಿಗೆ ವಿಡಿಯೋ ಕಾಲ್  ಮಾಡಿ ಮಾತನಾಡುವ ಮೂಲಕ ಸಂತೋಷವನ್ನು ನೀಡಿದ್ದಾರೆ. ಸಾಕೇತ್ ಮತ್ತು ಅವರ ಕುಟುಂಬ ಕಮಲ್ ಹಾಸನ್ ಅವರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿದೆ. ಇದರ ನಂತರ ಅವರ ವೀಡಿಯೊ ದಲ್ಲಿನ ಸಂಭಾಷಣೆಯ ತುಣುಕುಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಪ್ರಾರಂಭಿಸಿದೆ.

ಕಮಲ ಹಾಸನ್ ಅವರೊಂದಿಗೆ ಮಾತನಾಡಿದ ಕುಟುಂಬ ಸಂತೋಷದಿಂದಿರುವಂತೆ ಕಾಣಸಿಗುತ್ತಿದೆ. ರಮೇಶ್ ಬಾಲಾ ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದು   “ಕಮಲ್ ಹಾಸನ್ ಸರ್ ತಮ್ಮ ಅಭಿಮಾನಿ ಸಾಕೇತ್ ಗೆ ಸರ್ಪ್ರೈಸ್ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: