ಮೈಸೂರು

ಮೆಗಾ ಲಸಿಕಾ ಅಭಿಯಾನಕ್ಕೆ ಶಾಸಕ ಎಲ್.ನಾಗೇಂದ್ರ ಚಾಲನೆ

ಮೈಸೂರು, ಜೂ.24:- ಇಂದು ವಾರ್ಡ್ ಸಂ- 42 ರಲ್ಲಿ ಕೆ.ಜಿ.ಕೊಪ್ಪಲು ನಿವಾಸಿಗಳಿಗೆ ಟಿ.ಟಿ.ಎಲ್ ಕಾಲೇಜಿನಲ್ಲಿ, ವಾರ್ಡ್ ಸಂ- 20, ವಿಜಯನಗರದ ಕೊಡವಸಮಾಜದಲ್ಲಿ, ವಾರ್ಡ್ ಸಂ- 24 ರ ಸಾರ್ವಜನಿಕರಿಗೆ ವಿಧ್ಯಾವರ್ಧಕ ಕಾಲೇಜು ಆವರಣದಲ್ಲಿ, ವಾರ್ಡ್ ಸಂ- 26 ರ ಸಾರ್ವಜನಿಕರಿಗೆ ಹೋಲ್ಡ್ಸವರ್ತ್ ಮೆಮೋರಿಯಲ್ ಆಸ್ಪತ್ರೆ, ತಿಲಕ್ನಗರ ಇಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರದಲ್ಲಿ ವಾಸಿಸುತ್ತಿರುವ ಆಯಾ ವಾರ್ಡ್ ನಿವಾಸಿಗಳಿಗೆ 18 ವರ್ಷ ಮೇಲ್ಪಟ್ಟ ಹಾಗೂ 45 ವರ್ಷ ಒಳಗಿನ ವಯೋಮಾನದವರಿಗೆ ಪ್ರತಿ ಕೇಂದ್ರಗಳಿಗೆ 1000 ಡೋಸ್ ಸರಬರಾಜು ಮಾಡಲು ಕ್ರಮಕೈಗೊಂಡು ಕೋವಿಡ್ ಸೋಂಕಿನ ವಿರುದ್ದದ ಮೆಗಾ ಲಸಿಕಾ ಅಭಿಯಾನಕ್ಕೆ ಚಾಮರಾಜ ಕ್ಷೇತ್ರದ ವ್ಯಾಪ್ತಿಯ ಚಾಮರಾಜ ಕ್ಷೇತ್ರದ ಶಾಸಕರಾದ  ಎಲ್.ನಾಗೇಂದ್ರ ಚಾಲನೆ ನೀಡಿದರು.

ಮಹಾನಗರ ಪಾಲಿಕೆ ಸದಸ್ಯರುಗಳಾದ  ಶಿವಕುಮಾರ್,  ಸುಬಯ್ಯ,  ಎಂ.ಡಿ.ನಾಗರಾಜ್,  ರಮಣೀಶ್, ಮಾಜಿ ಸದಸ್ಯರಾದ  ದಾಸಪ್ರಕಾಶ   ವಲಯ ಕಚೇರಿಗಳ ಆಯುಕ್ತರುಗಳು, ಅಭಿವೃದ್ದಿ ಅಧಿಕಾರಿಗಳು, ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ. ನಾಗರಾಜ್, ಭಾ.ಜ.ಪ ಚಾಮರಾಜ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಪುನೀತ್ಗೌಡ, ಆಶ್ರಯ ಸಮಿತಿ ಸದಸ್ಯ  ಅನೂಜ್, ಉಪಾಧ್ಯಕ್ಷರಾದ ಶಿವಕುಮಾರ್, ಎಲ್.ಮಂಜುನಾಥ್, ಗಂಗಾಧರ್, ಸಾಗರ್, ವಿಜಯನಗರ ಸತೀಶ್, ರವಿರಾಜಕೀಯ ಶ್ರೀನಾಥ್, ಅವಿನಾಶ್,ಅಶೋಕ, ಸೂರಜ್, ಬಾಲಾಜಿ, ಸ್ವಾಮಿ, ಮುಂತಾದವರು ಹಾಜರಿದ್ದು ಕೇಂದ್ರಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅಗತ್ಯ ಸಹಾಯವನ್ನು ಮಾಡುತ್ತಿದ್ದರು.

,ಈ ಲಸಿಕಾ ಅಭಿಯಾನದ ಚಾಲನೆ ನೀಡಿದ ನಂತರ  ಶಾಸಕರು ಇಂದು ಚಾಲನೆ ನೀಡಲಾದ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಖುದ್ದು ಹಾಜರಿದ್ದು ಲಸಿಕಾ ಕಾರ್ಯಕ್ರಮ ನಡೆಯುತ್ತಿರುವುದನ್ನು ಪರಿಶೀಲನೆ ನಡೆಸಿದರು ಹಾಗೂ ಲಸಿಕೆ ಪಡೆಯಲು ಆಗಮಿಸಿದ್ದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಆಸನದ ವ್ಯವಸ್ಥೆ, ಕುಡಿಯುವನೀರು, ಲಘು ಫಲಾಹಾರ ಮತ್ತು ತಂಪು ಪಾನೀಯವನ್ನು ಸ್ವತಃ ವಿತರಣೆ ಮಾಡಿದರು. (ಜಿ.ಕೆ,ಎಸ್.ಎಚ್)

 

 

Leave a Reply

comments

Related Articles

error: