ಸುದ್ದಿ ಸಂಕ್ಷಿಪ್ತ

ಜಿಲ್ಲಾ ಮಟ್ಟದ ವಾರ್ಷಿಕ ಸಮಾವೇಶ ಮತ್ತು ಬೆಳ್ಳಿ ಹಬ್ಬ ಆಚರಣೆ:ಏ.28 ರಂದು

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕ ಮಾರಾಟಗಾರರ ಸಂಘದ ಜಿಲ್ಲಾ ಮಟ್ಟದ ವಾರ್ಷಿಕ ಸಮಾವೇಶ ಮತ್ತು ಸಂಘದ ಬೆಳ್ಳಿ ಹಬ್ಬದ ಕಾರ್ಯಕ್ರಮವನ್ನು ಏ.28ರಂದು ಬೆಳಿಗ್ಗೆ 10.15 ಗಂಟೆಗೆ ಬಿ.ಎನ್.ರಸ್ತೆಯ  ಹೋಟೆಲ್ ಪ್ರೆಸಿಡೆಂಟ್ ನಲ್ಲಿ ಆಯೋಜಿಸಲಾಗಿದೆ.

ಧಾರವಾಡ ಕೃಷಿ ವಿವಿಯ ವಿಶ್ರಾಂತ ಕುಲಪತಿ ಡಾ.ಎಂ.ಮಹದೇವಪ್ಪ ಚಾಲನೆ ನೀಡಲಿದ್ದಾರೆ. ಶಾಸಕ ಪಿ.ವಾಸು,  ಜಂಟಿ ನಿರ್ದೇಶಕ ಡಾ.ಕೆ.ಎಂ.ಸೋಮಸುಂದ್ರ, ಡಾ.ಎಂ.ತಿರುಮಲೇಶ, ಶಾಂತಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಘದ ಅಧ್ಯಕ್ಷ ಸಿ.ಎನ್.ಕೇಶವ ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ.

Leave a Reply

comments

Related Articles

error: