ಪ್ರಮುಖ ಸುದ್ದಿಮನರಂಜನೆ

ಟಿವಿಯ ಖ್ಯಾತ ಕಾಮಿಡಿ ಶೋ ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’  ‘ನಟ್ಟು ಕಾಕಾ’ ಘನಶ್ಯಾಂ ನಾಯಕ ಗೆ ಕ್ಯಾನ್ಸರ್  

ದೇಶ(ಮುಂಬೈ)ಜೂ.25:- ಕಳೆದ ವರ್ಷ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಇಡೀ ದೇಶದಲ್ಲಿ ಲಾಕ್‌ಡೌನ್ ವಿಧಿಸಲಾಗಿತ್ತು. ಈ ಕಾರಣದಿಂದಾಗಿ ಎಲ್ಲಾ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳ ಚಿತ್ರೀಕರಣವನ್ನು ನಿಲ್ಲಿಸಲಾಗಿತ್ತು.  ಇದರಿಂದಾಗಿ ಟಿವಿ ಕಾಮಿಡಿ ಶೋ ತಾರಕ್ ಮೆಹ್ತಾ   ಶೂಟಿಂಗ್ ಕೂಡ ನಿಲ್ಲಿಸಲಾಗಿತ್ತು.  ಶೋ ನಲ್ಲಿ ಬರುವ ನಟ್ಟು ಕಾಕಾ ತನ್ನ ಹಳ್ಳಿಗೆ ಹೋಗಿದ್ದಾರೆ ಎಂದು ತೋರಿಸಲಾಗಿತ್ತು. ಶೋ ಮತ್ತೆ ಪ್ರಾರಂಭವಾದರೂ, ಶೋ ನಲ್ಲಿ ನಟ್ಟು ಕಾಕಾ ಮತ್ತೆ ಕಾಣಿಸಿಲ್ಲ. ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಅವರು ಅನಾರೋಗ್ಯದ ಕುರಿತು ಮಾಹಿತಿ ಪಡೆದಿದ್ದು   ಪ್ರಸ್ತುತ ಅವರ ಕಾಯಿಲೆಗೆ  ಚಿಕಿತ್ಸೆ ನಡೆಯುತ್ತಿದೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ಕೀಮೋಥೆರಪಿಗೆ ಹಲವಾರು ಬಾರಿ ಹೋದ ನಂತರ  ಈಗ ನಾನು  ಉತ್ತಮವಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ   ಅವರ ಪುತ್ರ ವಿಕಾಸ್ ಸಂದರ್ಶನವೊಂದರಲ್ಲಿ ಮಾತನಾಡಿ ಮೂರು ತಿಂಗಳ ಹಿಂದೆ ನನ್ನ ತಂದೆಯ ಕುತ್ತಿಗೆಯಲ್ಲಿ ಕೆಲವು ಕಲೆಗಳು ಕಾಣಿಸಿಕೊಂಡಿತ್ತು.  ನಂತರ ನಾವು ತಕ್ಷಣ ಅವರಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದ್ದೆವು. ಏಪ್ರಿಲ್ ನಲ್ಲಿ ತಂದೆಯವರ ಗಂಟಲಿನ ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ ಸ್ಕ್ಯಾನಿಂಗ್ ಮಾಡಲಾಗಿದೆ ಎಂದು  ಹೇಳಿದ ಅವರು ನಂತರ ಅವರಿಗೆ ಕ್ಯಾನ್ಸರ್ ಇದೆ ಎಂಬುದು ನಮಗೆ ತಿಳಿದು ಬಂದಿದೆ ಎಂದಿದ್ದಾರೆ.

ಕಳೆದ ವರ್ಷ ಘನಶ್ಯಾಂ ನಾಯಕ್ ಅವರ ಗಂಟಲಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು, ಅದರಲ್ಲಿ ಅವರ ಗಂಟಲಿನಿಂದ 8 ಗಂಟುಗಳನ್ನು ತೆಗೆದುಹಾಕಲಾಗಿದೆ. ಈ ಕಾರಣಕ್ಕಾಗಿ ಅವರು ಕಾರ್ಯಕ್ರಮದಿಂದ ವಿರಾಮ ತೆಗೆದುಕೊಂಡರು ಎಂದಿದ್ದಾರೆ.

ಘನಶ್ಯಾಂ ಕೂಡ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ ಕಳೆದ ಹಲವಾರು ದಿನಗಳಿಂದ ನಾನು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಪ್ರಸ್ತುತ ನನಗೆ ಚಿಕಿತ್ಸೆ ನೀಡಲಾಗುತ್ತಿದೆ. ನಾನು ಸುಧಾರಿಸಿಕೊಳ್ಳುತ್ತಿದ್ದೇನೆ. ಇದರೊಂದಿಗೆ ಶೀಘ್ರದಲ್ಲೇ  ನಾನು ಕೆಲಸಕ್ಕೆ ಮರಳಲು ಬಯಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: