
ಮೈಸೂರು
ತಂದೆ ತಾಯಿಯ ಸಾವಿನಿಂದ ನೊಂದಿದ್ದ ಮಗ ವಿಷ ಸೇವಿಸಿ ಆತ್ಮಹತ್ಯೆ
ಮೈಸೂರು,ಜೂ.25:- ತಂದೆ ತಾಯಿಯ ಸಾವಿನಿಂದ ನೊಂದಿದ್ದ ಮಗ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದವನನ್ನು ಮೈಸೂರಿನ ಗಾಂಧಿನಗರ ನಿವಾಸಿ ಎಸ್. ಕಾರ್ತಿಕ್ ಎಂದು ಹೇಳಲಾಗಿದೆ. ಕಳೆದ 8 ವರ್ಷಗಳ ಹಿಂದೆ ಕಾರ್ತಿಕ್ ತಂದೆ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ತಂದೆ ತಾಯಿ ಕಳೆದುಕೊಂಡು ಕಾರ್ತಿಕ್ ತುಂಬಾ ನೋವನುಭವಿಸುತ್ತಿದ್ದ. ಈ ಹಿಂದೆ ತಂದೆ ಹಾಗೂ ತಾಯಿ ಸಾವಿಗೀಡಾದ ದಿನವೇ ಕಾರ್ತಿಕ್ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ಬದುಕುಳಿದಿದ್ದ.
ಏತನ್ಮಧ್ಯೆ ತನ್ನ ಹುಟ್ಟುಹಬ್ಬದ ದಿನವೇ ಶ್ರೀರಂಗಪಟ್ಟಣ ಸಮೀಪ ಪಶ್ಚಿಮ ವಾಹಿನಿಯ ಕಾವೇರಿ ದಡದ ಬಳಿ ವಿಷ ಸೇವಿಸಿ ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ಸ್ನೇಹಿತರಿಗೆ ಡೆತ್ ನೋಟ್ ಬರೆದಿಟ್ಟು ಕಾರ್ತಿಕ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಕುರಿತು ಶ್ರೀರಂಗಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)