ಮೈಸೂರು

ಚಿತ್ರಮಂದಿರದ ನೌಕರರಿಗೆ ಚಾಲೆಂಜಿಂಗ್ ಸ್ಟಾರ್ ತೂಗುದೀಪ್ ದರ್ಶನ್ ಅಭಿಮಾನಿ ಬಳಗದ ವತಿಯಿಂದ ದಿನಸಿ ಕಿಟ್ ವಿತರಣೆ

ಮೈಸೂರು,ಜೂ.26:-  ಚಾಲೆಂಜಿಂಗ್ ಸ್ಟಾರ್ ತೂಗುದೀಪ್ ದರ್ಶನ್ ಅಭಿಮಾನಿ ಬಳಗದ ವತಿಯಿಂದ ಶಿವರಾಂ ಪೇಟೆಯಲ್ಲಿರುವ ರಾಜ್ ಕಮಲ್ ಚಿತ್ರಮಂದಿರದ ನೌಕರರಿಗೆ ಮಾಜಿ ಮಹಾಪೌರರಾದ ಧ್ರುವಕುಮಾರ್ ಅವರು ದಿನಸಿ ಕಿಟ್ ವಿತರಿಸಿದರು.

ಬಳಿಕ ಮಾತನಾಡಿದ ಅವರು ಈಗಾಗಲೇ ದರ್ಶನ್ ಅಭಿಮಾನಿಗಳು ಮೈಸೂರಿನ ಲಕ್ಷ್ಮಿ, ಗಾಯತ್ರಿ ,ಪದ್ಮಾ ಚಿತ್ರಮಂದಿರದ ನೌಕರರಿಗೆ ದಿನಸಿ  ಕಿಟ್ ವಿತರಿಸಿ ನಿರಂತರವಾಗಿ ಸಮಾಜಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ ಕೆಲಸ.  ದರ್ಶನ್ ಅವರು ಪ್ರಾಣಿ ಪಕ್ಷಿಗಳ ಸೇವೆ ಅಲ್ಲದೆ ನಿಜವಾಗಿಯೂ ತೊಂದರೆಯಲ್ಲಿರುವ  ಬಡವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಲಾಕ್ ಡೌನ್  ಸಂದರ್ಭದಲ್ಲಿ ಹಲವಾರು ಚಲನಚಿತ್ರ ನಟ ನಟಿಯರು ಒಂದೊಂದು ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ನಮ್ಮ ಕನ್ನಡ ಚಿತ್ರೋದ್ಯಮಕ್ಕೆ  ಇದು ಹೆಮ್ಮೆಯ ವಿಚಾರ.  ಇವರ ಹಾದಿಯಲ್ಲೇ ಮುಂಬರುವ ಯುವ ನಟ ನಟಿಯರು ಇವರ ಸಾಮಾಜಿಕ ಸೇವೆಯ  ದಾರಿಯಲ್ಲಿ ಸಾಗಲಿ ಎಂದು ಹಾರೈಸಿದರು.

ಈ ಸಂದರ್ಭ ರಾಜ್ ಕಮಲ್ ಚಿತ್ರಮಂದಿರದ ಮಾಲೀಕರಾದ ಜೀವನ್ ರಾವ್ ,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ನವೀನ್ ಕುಮಾರ್ ,ಸಮಾಜ ಸೇವಕರಾದ  ಪರಮೇಶ್ ಗೌಡ,ತೂಗುದೀಪ್ ದರ್ಶನ್ ಅಭಿಮಾನಿ ಬಳಗದ ಬನ್ನೂರು  ಮಹೇಂದ್ರಸಿಂಗ್ ಕಾಳಪ್ಪ,ಹರೀಶ್ ನಾಯ್ಡು ,ಕಿರಣ್ ಗೌಡ ,ಮಂಜುನಾಥ್ ಗೌಡ   ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: