ಮೈಸೂರು

ಇತಿಹಾಸ ಸೃಷ್ಟಿಸಿದ ವೀರ ವ್ಯಕ್ತಿ ನಾಡ ಪ್ರಭು ಕೆಂಪೇಗೌಡ : ಶಾಸಕ ಜಿ.ಟಿ.ದೇವೇಗೌಡ ಬಣ್ಣನೆ

ಮೈಸೂರು, ಜೂ.27:-  ರಾಜ್ಯದ ರಾಜಧಾನಿ ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದು ವಿಶೇಷವಾಗಿ ಗುರುತಿಸಿಕೊಳ್ಳುವಲ್ಲಿ ನಾಡಪ್ರಭು ಕೆಂಪೇಗೌಡರವರ ಕೊಡುಗೆ ಅಪಾರ ಎಂದು ಶಾಸಕ ಜಿ.ಟಿ.ದೇವೇಗೌಡ ತಿಸಿದರು.

ಜನಪರ ಆಡಳಿತ ನೀಡಿದವರು ಕೆಂಪೇಗೌಡರು, ಬೆಂಗಳೂರಿನ ಜನತೆಗೆ ಅಗತ್ಯ ವಸ್ತುಗಳು ಸಿಗಬೇಕು ಎನ್ನುವ ಉದ್ದೇಶದಿಂದ ಸುಮಾರು 25ಕ್ಕೂ ಹೆಚ್ಚು ಪೇಟೆಗಳನ್ನು ಕೆಂಪೇಗೌಡರು ನಿರ್ಮಿಸಿದರು. ಒಂದು ಸುಸಜ್ಜಿತ ನಗರದ ನಿರ್ಮಾಣ ಮಾಡುವಂತಹ ದೂರದೃಷ್ಠಿ ಹಾಗೂ ಕನಸ ಹೊಂದಿದವರಲ್ಲಿ ಕೆಂಪೇಗೌಡರು ಪ್ರಮುಖರು, ಸಮಾಜದಲ್ಲಿ ಎಲ್ಲಾ ಜನರ ಹಿತವನ್ನು ಬಯಸಿದವರು ಕೆಂಪೇಗೌಡರು.

ಸಮಾಜದ ಅಭಿವೃದ್ಧಿ, ಕಾಳಜಿ, ಕಳಕಳಿ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಹೊಂದಿದ್ದರವರು ಕೆಂಪೇಗೌಡರು, ವಿಶ್ವದಲ್ಲಿಯೇ ಬೆಂಗಳೂರು ನಗರ ಪ್ರಬುದ್ದ ಸ್ಥಾನದಲ್ಲಿದೆ ಎಂದರೆ ಅದರ ಹಿಂದೆ ಇದ್ದ ಕೆಂಪೇಗೌಡರ ಚಿಂತನೆ ಹಾಗೂ ತ್ಯಾಗ ಅಪಾರವಾದದ್ದು ಎಂದರು.
ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಿರ್ಮಾಣದ ಜೊತೆಗೆ ಜನಸಾಮಾನ್ಯರಿಗಾಗಿ ಕೆರೆ, ಕಟ್ಟೆಗಳನ್ನು ಕಟ್ಟಿಸಿದ್ದಾರೆ, ಮರ ಗಿಡಗಳನ್ನು ಬೆಳೆಸಿದ್ದಾರೆ, ವ್ಯವಸಾಯಕ್ಕೆ ಹೆಚ್ಚು ಒತ್ತನ್ನು ನೀಡಿದ್ದರು, ಅವರು ಕಟ್ಟಿದ ಕೆರೆ ಕಟ್ಟೆಗಳನ್ನು ಕಟ್ಟಡಗಳನ್ನು ಉಳಿಸುವ ಕಾರ್ಯ ಆಗಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರ ಮಂಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚನ್ನಪ್ಪ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: