ಕರ್ನಾಟಕಪ್ರಮುಖ ಸುದ್ದಿಮೈಸೂರು

ಸುತ್ತೂರು ಮಠಕ್ಕೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಭೇಟಿ

ಮೈಸೂರು, ಜೂ.27:- ಮಾಜಿ ಗೃಹ ಹಾಗೂ ನೀರಾವರಿ ಸಚಿವರೂ ಕಾಂಗ್ರೆಸ್ ಹಿರಿಯ ಮುಖಂಡರಾದ  ಎಂ.ಬಿ.ಪಾಟೀಲ್ ಅವರು ಮೈಸೂರು ಸಂಸ್ಥಾನದ ಸುತ್ತೂರು ಮಠಕ್ಕೆ ಭೇಟಿ ನೀಡಿದರು.

ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರನ್ನು ಭೇಟಿ ಮಾಡಿ ಅವರ ಮಾತೃಶ್ರೀಯವರ ನಿಧನಕ್ಕೆ ಸಂತಾಪ ಸೂಚಿಸಿದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು    ಇತರರಂತೆ ಸಿಎಂ ಹುದ್ದೆಯ ಆಕಾಂಕ್ಷಿ ಹೌದು. ಆದರೆ ಅಂತಹ ಸದಾಶಯಗಳು ದುರಾಸೆಯಾಗಿ ಬದಲಾಗಬಾರದು ಎಂದು ಎಚ್ಚರಿಸಿದರು.

150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಸಾಧಿಸಲು ಪಕ್ಷವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಲಿದೆ. ಈ ವೇಳೆ ಅವರು ಕಾಂಗ್ರೆಸ್ಸಿಗರನ್ನು ವಲಸಿಗರು ಮತ್ತು ಸ್ಥಳೀಯರು ಎಂದು ವರ್ಗೀಕರಿಸುವ ಹೇಳಿಕೆ ನೀಡಿದ ಪಾಟೀಲ್ ಈ ಬಗ್ಗೆ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪಕ್ಷದ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಎಚ್ಚರಿಸಿದ್ದಾರೆ, ಖಾನ್ ಸಿದ್ದರಾಮಯ್ಯ ಅವರನ್ನು ಪಕ್ಷದ ಸಿಎಂ ಅಭ್ಯರ್ಥಿಯಾಗಿ ಬಿಂಬಿಸುತ್ತಿದ್ದಾರೆ.  ಅಂತಹ ವ್ಯತ್ಯಾಸ(ವಲಸಿಗರು ಮತ್ತು ಸ್ಥಳೀಯರು)ವನ್ನು ತರುವುದು ತಪ್ಪು. ಒಮ್ಮೆ ಅವರು ಕಾಂಗ್ರೆಸ್ ಗೆ ಸೇರಿದ್ದರೆ ಅವರೆಲ್ಲರೂ ಕಾಂಗ್ರೆಸ್ಸಿಗರು. ನಾವೆಲ್ಲರೂ ಒಗ್ಗಟ್ಟಿನಲ್ಲಿದ್ದೇವೆ ಎಂದು ಅವರು ಹೇಳಿದರು. ಚುನಾವಣೆಯಲ್ಲಿ ಗೆಲ್ಲುವುದು ಪಕ್ಷಕ್ಕೆ ಆದ್ಯತೆಯಾಗಿದೆ ಮತ್ತು ಸಿಎಂ ಅಭ್ಯರ್ಥಿಯನ್ನು ಹೈಕಮಾಂಡ್ ಶಿಫಾರಸುಗಳ ಮೇಲೆ ನಿರ್ಧರಿಸಲಾಗುವುದು ಎಂದು ಬಬಲೇಶ್ವರ ಶಾಸಕರು ಹೇಳಿದ್ದಾರೆ. ಬಿ.ಎಸ್.ಯಡಿಯೂರಪ್ಪ ನಂತರ ಲಿಂಗಾಯತರಲ್ಲಿ ನಾಯಕತ್ವದ ಶೂನ್ಯತೆ  ಕುರಿತಂತೆ ಪ್ರತಿಕ್ರಿಯಿಸಿ   ಯಡಿಯೂರಪ್ಪ ಒಬ್ಬ ಎತ್ತರದ ನಾಯಕ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ಸಮುದಾಯದ ಎರಡನೇ ಸಾಲಿನ ನಾಯಕರು, ಖಂಡ್ರೆ ಮತ್ತು ಬೊಮ್ಮಾಯಿ, ಯತ್ನಾಳ್ ಮತ್ತಿತರರೂ ಕೂಡ ಇದ್ದಾರೆ. ಬಿಜೆಪಿಯಲ್ಲಿ ಬೆಲ್ಲದ್  ಅಂತಹ ಒಂದು ಹೊಸ ಹೆಸರಾಗಿದೆ  ಎಂದರು. ಒಬ್ಬ ನಾಯಕನನ್ನು ಸಿಎಂ ಆಗಿ ನೇಮಕ ಮಾಡಲು ನಿರ್ಧರಿಸುವುದು ಜನರ ಜವಾಬ್ದಾರಿಯಾಗಿದೆಯೇ ಹೊರತು ಸ್ವಯಂ ಪ್ರಮಾಣೀಕರಣದ ಮೂಲಕ ಅಲ್ಲ ಎಂದು ಅವರು ಹೇಳಿದರು. ಲಸಿಕೆ ಅಭಿಯಾನ  ಸಾಂಕ್ರಾಮಿಕ ಅಲೆಗಳ ವಿರುದ್ಧ ಹೋರಾಡುವ ಪ್ರಮುಖ ಮಾರ್ಗವಾಗಿದೆ ಎಂದು ಮಾಜಿ ಸಚಿವರು ಗಮನಸೆಳೆದರು ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇದರಲ್ಲಿ ವಿಫಲವಾಗಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರುಗಳಾದ ಎಂ ಕೆ ಸೋಮಶೇಖರ್ ,ವಾಸು,ಕಳಲೇ ಕೇಶವಮೂರ್ತಿ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಬಿ.ಜೆ.ವಿಜಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: