ದೇಶಪ್ರಮುಖ ಸುದ್ದಿ

ಶಂಕಿತ ಉಗ್ರನೊಬ್ಬನ ಬಂಧನ : ಜಮ್ಮು ಮತ್ತು ಕಾಶ್ಮೀರ ಪೊಲೀಸರ ಕಾರ್ಯಾಚರಣೆ

ದೇಶ(ಜಮ್ಮು)ಜೂ.28:- ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬರ್ಮಿನಿ ರಸ್ತೆಯಲ್ಲಿ ಶಂಕಿತ ಉಗ್ರನೊಬ್ಬನನ್ನು ಬಂಧಿಸಿದ್ದು, ಬಂಧಿತನಿಂದ 5.5 ಕೆಜಿ ತೂಕದ ಎಲ್ ಇಡಿ ಸ್ಫೋಟಕವನ್ನು ವಶಪಡಿಸಿಕೊಂಡಿದ್ದಾರೆ.

ಶಂಕಿತನನ್ನು ನದೀಂ ಉಲ್ ಹಖ್ ಎಂದು ಗುರುತಿಸಲಾಗಿದೆ. ಈತ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಜೊತೆಗೆ ನಂಟು ಹೊಂದಿರುವ ರೆಸಿಸ್ಟೆನ್ಸ್ ರೆಸಿಸ್ಟೆನ್ಸ್ ಸಂಘಟನೆಗೆ ಸೇರಿದವನು ಎನ್ನಲಾಗಿದೆ.

ನದೀಂ ರಾಮ್ ಬಾನ್ ನ ಜೈನ್ ಹಾಲ್ -ಬನಿಹಾಲ್ ನಿವಾಸಿಯಾಗಿದ್ದು, ಈತನ ಬಂಧನದಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಈತ ಪಾಕಿಸ್ತಾನ ಹಾಗೂ ದಕ್ಷಿಣ ಕಾಶ್ಮೀರದ ಶೋಪಿಯಾನ್ ನಲ್ಲಿರುವ ಸಂಘಟನೆಯ ಉಗ್ರರೊಂದಿಗೆ ಸಂಪರ್ಕದಲ್ಲಿದ್ದ ಎಂದು ಜಮ್ಮುವಿನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಚಂದನ್ ಕೊಹ್ಲಿ ತಿಳಿಸಿದ್ದಾರೆ.

ಕಾನೂನು ಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಮತ್ತು ಸ್ಫೋಟಕ ಪದಾರ್ಥಗಳ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಈತನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: