ಮೈಸೂರು

ಅನ್ ಲಾಕ್ ಹಿನ್ನೆಲೆ ; ತೆರೆದ ಬಟ್ಟೆ ಮಳಿಗೆ; ಸ್ಥಳಕ್ಕಾಗಮಿಸಿ ಮಳಿಗೆ ಬಾಗಿಲು ಮುಚ್ಚಿಸಿದ ಪೊಲೀಸರು ; ಪ್ರತಿಭಟನೆ

ಮೈಸೂರು,ಜೂ.28:- ಮೈಸೂರು ಜಿಲ್ಲೆ ಭಾನುವಾರದಿಂದಲೇ ಅನ್ ಲಾಕ್ ಆಗಿದ್ದು  ಮಧ್ಯಾಹ್ನ 2ಗಂಟೆಯವರೆಗೆ ದಿನಸಿ, ಹಣ್ಣು ತರಕಾರಿ, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.

ಸಯ್ಯಾಜಿರಾವ್ ರಸ್ತೆಯಲ್ಲಿನ ಬಟ್ಟೆ ಮಳಿಗೆಯೊಂದನ್ನು ಇಂದು ತೆರೆಯಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಮಳಿಗೆಯನ್ನು  ಮುಚ್ಚಿಸಿದ್ದಾರೆ. ಬಟ್ಟೆ ಮಳಿಗೆಯನ್ನು ತೆರೆಯಲು ಅವಕಾಶ ನೀಡಿಲ್ಲ. ಕೇವಲ ದಿನಸಿ ಪದಾರ್ಥ, ಹಾಲು ಹಣ್ಣುಗಳ ಅಂಗಡಿಗಳಿಗಷ್ಟೇ ಅವಕಾಶ ನೀಡಲಾಗಿದೆ ಎಂದು ಮಳಿಗೆಯ ಮಾಲಕರಿಗೆ ಹೇಳಿದ್ದು, ಮಳಿಗೆಯ ಮಾಲಕರು ನಮಗೂ ಮಳಿಗೆಗಳನ್ನು ತೆರೆಯುವುದಕ್ಕೆ ಅವಕಾಶ ಕಲ್ಪಿಸಿ, ಪಾರ್ಕ್ ಗಳನ್ನು ಬೆಳಿಗ್ಗೆ 10ಗಂಟೆಯವರೆಗೆ ತೆರೆಯಲು ಅವಕಾಶ ನೀಡಿದ್ದೀರಿ, ಮದ್ಯ, ಸೆಲೂನ್ ಎಲ್ಲ ಅಂಗಡಿಗಳು ತೆರೆದಿರುತ್ತವೆ. ನಮಗೆ ಮಾತ್ರ ನೀವು ಯಾಕೆ ತೆರೆಯಲು ಅನುಮತಿ ನೀಡುತ್ತಿಲ್ಲ. ಮಳಿಗೆಗಳು ಬಂದಾಗಿ ಮೂರು ತಿಂಗಳಾಗುತ್ತ ಬಂತು. ಕಳೆದ ವರ್ಷ ಕೂಡ ಲಾಕ್ ಡೌನ್ ಇದ್ದ ಕಾರಣ ವ್ಯಾಪಾರ ವಹಿವಾಟು ನಡೆದಿಲ್ಲ. ಇದೇ ರೀತಿ ಆದರೆ ನಾವು ಜೀವನ ನಿರ್ವಹಿಸುವುದು ಹೇಗೆ ಎಂದು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದರು.

ಸಾಕಷ್ಟು ಸಂಖ್ಯೆಯಲ್ಲಿ ಜನ ಸ್ಥಳದಲ್ಲಿ ಗುಂಪುಗುಂಪಾಗಿ ಸೇರಿದ್ದ ಕಾರಣ ಕೊರೋನಾ ನಿಯಂತ್ರಣ ಮಾಡುತ್ತೇವೆಂದು ಅಧಿಕಾರಿಗಳು ಜನಸಾಮಾನ್ಯರನ್ನು ಸತಾಯಿಸುತ್ತಾರೆ. ಈ ರೀತಿ ಗುಂಪು ಕಟ್ಟಿ ಜನರು ಸೇರಿದರೆ ಕೊರೋನಾ ಹರಡುವುದಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದು, ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆಂಬುದನ್ನು ಕಾದು ನೋಡಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: