ದೇಶಪ್ರಮುಖ ಸುದ್ದಿ

ದೇಶದಲ್ಲಿ ಕಳೆದ  24 ಗಂಟೆಗಳಲ್ಲಿ 50 ಸಾವಿರಕ್ಕಿಂತ ಕಡಿಮೆ ಹೊಸ ಕೊರೋನಾ ಪ್ರಕರಣ ಪತ್ತೆ  

ದೇಶ(ನವದೆಹಲಿ)ಜೂ.28:- ದೇಶದಲ್ಲಿ ಕೊರೋನಾ ಸೋಂಕು ಪ್ರಸರಣದಲ್ಲಿ ಇಳಿಮುಖವಾಗುತ್ತಿದೆ.   ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 46,148 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದ್ದು, 979 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಅದೇ ವೇಳೆ  ಹಿಂದಿನ ದಿನ 58,578 ಜನರು ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,72,994 ಕ್ಕೆ ಇಳಿದಿದೆ. ಕೊರೊನಾ ಕಾರಣದಿಂದಾಗಿ ದೇಶದಲ್ಲಿ ಈವರೆಗೆ 3,96,730 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಕೊರೋನಾದಿಂದ ಚೇತರಿಸಿಕೊಳ್ಳುವ ಜನರ ಪ್ರಮಾಣ 96.80% ಕ್ಕೆ ಏರಿದೆ.

ಭಾನುವಾರ 50,040 ಹೊಸ ಕೊರೋನಾ ಪ್ರಕರಣಗಳು ಬಂದಿತ್ತು. 1258 ಸೋಂಕಿತರು ಪ್ರಾಣ ಕಳೆದುಕೊಂಡಿದ್ದರು. ದೇಶದಲ್ಲಿ ಭಾನುವಾರ 17 ಲಕ್ಷ 21 ಸಾವಿರ ಡೋಸ್ ಲಸಿಕೆಗಳನ್ನು ನೀಡಲಾಗಿದೆ. ಉಳಿದ ದಿನಗಳಿಗೆ ಹೋಲಿಸಿದರೆ ಭಾನುವಾರದಂದು ವ್ಯಾಕ್ಸಿನೇಷನ್ ವೇಗ ಕಡಿಮೆ.   ದೇಶದಲ್ಲಿ ಇದುವರೆಗೆ 32 ಕೋಟಿ 36 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ನಿನ್ನೆ ಕೊರೋನದ 15,70,515 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಈವರೆಗೆ ದೇಶದಲ್ಲಿ ಒಟ್ಟು 40 ಕೋಟಿ 63 ಲಕ್ಷ 71 ಸಾವಿರ 279 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಕೊರೋನಾ ಸೋಂಕಿನ ಇತ್ತೀಚಿನ ಸ್ಥಿತಿ ಹೀಗಿದೆ.

ಒಟ್ಟು ಕೊರೋನಾ ಪ್ರಕರಣಗಳು – ಮೂರು ಕೋಟಿ 2 ಲಕ್ಷ 79 ಸಾವಿರ 331, ಒಟ್ಟು ಡಿಸ್ಚಾರ್ಜ್ – ಎರಡು ಕೋಟಿ 93 ಲಕ್ಷ 09 ಸಾವಿರ 607, ಒಟ್ಟು ಸಕ್ರಿಯ ಪ್ರಕರಣಗಳು – 5 ಲಕ್ಷ 72 ಸಾವಿರ 994, ಒಟ್ಟು ಸಾವು- 3 ಲಕ್ಷ 96 ಸಾವಿರ 730 ಇದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: