ಮೈಸೂರು

ಮಾದಕವಸ್ತುಗಳ ಬಗ್ಗೆ ಸತ್ಯವನ್ನು ಹಂಚಿಕೊಳ್ಳಿ, ಜೀವ ಉಳಿಸಿ : ಕೆ.ಆರ್.ರಘು

ಮೈಸೂರು, ಜೂ . 28 :- ‘ಮಾದಕ ವಸ್ತುಗಳ ಬಗ್ಗೆ ಸತ್ಯವನ್ನ ಹಂಚಿಕೊಳ್ಳಿ, ಜೀವ ಉಳಿಸಿ’ ಎಂಬ ಶೀರ್ಷಿಕೆಯಡಿ ಜೂನ್ 26ರಂದು 2021ರ ಮಾದಕ ವಸ್ತು ಮತ್ತು ಅಕ್ರಮ ಕಳ್ಳ ಸಾಗಣೆ ವಿರುದ್ಧದ ಅಂತಾರಾಷ್ಟ್ರೀಯ ದಿನವನ್ನು ಆಚರಿಸಲಾಗಿದೆ ಎಂದು ಸಿ.ಇ.ಎನ್. ಕ್ರೈಂ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಕೆ.ಆರ್.ರಘು ಅವರು ತಿಳಿಸಿದ್ದಾರೆ.
ಈ ವರ್ಷ ಅಂತರರಾಷ್ಟ್ರೀಯ ದಿನದ ವಿಷಯವು ಮಾದಕ ವಸ್ತುಗಳ ಬಗ್ಗೆ ತಪ್ಪು ಮಾಹಿತಿಯನ್ನು ಎದುರಿಸುವ ಗುರಿಯನ್ನು ಹೊಂದಿದೆ. ಇದರಿಂದಾಗುವ “ಆರೋಗ್ಯದ ಅಪಾಯಗಳ ಬಗ್ಗೆ ಜಾಗೃತಿ, ವಿಶ್ವ ಮಾದಕ ವಸ್ತುಗಳ ಸಮಸ್ಯೆಯನ್ನು ನಿಭಾಯಿಸುವ ಪರಿಹಾರಗಳು, ಪುರಾವೆ ಆಧಾರಿಸಿ ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ಆರೈಕೆ”ಗೆ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಯುವಕರು ಮತ್ತು ವಿದ್ಯಾರ್ಥಿಗಳು ತಮ್ಮ ಗಮನಕ್ಕೆ ಬಂದ ಡ್ರಗ್ಸ್ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಯೊಂದಿಗೆ ಹಂಚಿಕೊಂಡಲ್ಲಿ ಮಾದಕ ವಸ್ತು ಸೇವನೆಯನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಅಕ್ರಮ ಮಾದಕ ದ್ರವ್ಯಗಳ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಿದೆ. ಮೈಸೂರು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂ ಸಂಖ್ಯೆ: 0821-2418612, ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 0821-2483637 ಸಂಪರ್ಕಿಸಬಹುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ( ಕೆ.ಎಸ್,ಎಸ್.ಎಚ್)

Leave a Reply

comments

Related Articles

error: