ಸುದ್ದಿ ಸಂಕ್ಷಿಪ್ತ

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ : ವಿಶೇಷ ಉಪನ್ಯಾಸ ‘ಏ.27ಕ್ಕೆ’

ಮಾನಸಗಂಗೋತ್ರಿ, ಬಿ.ಎಂ.ಶ್ರೀ ಸಭಾಂಗಣ : ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಸಂಶೋಧನಾ ವಿದ್ಯಾರ್ಥಿ ವೇದಿಕೆ ಸಹಯೋಗದೊಂದಿಗೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 126ನೇ ಜನ್ಮದಿನಾಚರಣೆ ಹಾಗೂ ವಿಚಾರ ಸಂಕಿರಣವನ್ನು ಏ.27ರ ಬೆಳಿಗ್ಗೆ 10.30ಕ್ಕೆ ಮಾನಸಗಂಗೋತ್ರಿಯ ಬಿ.ಎಂ.ಶ್ರೀಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ಕುವೆಂಪು ಕನ್ನಡ ಅಧ್ಯಯನ ಪೀಠದ ನಿರ್ದೇಶಕಿ ಪ್ರೊ.ಪ್ರೀತಿ ಶ್ರೀಮಂಧರ್ ಕುಮಾರ್, ಸಂಪಾದಕ ರಾಜಶೇಖರ್ ಕೋಟಿ ಉಪಸ್ಥಿತರಿರುವರು, ಅಧ್ಯಕ್ಷತೆ ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆಯವರು, ಜಗ್ಗು ಜಾದೂಗಾರ ಅವರಿಂದ ಇಂದ್ರಜಾಲ ಅಭಿವ್ಯಕ್ತಿಯಲ್ಲಿ ಅಂಬೇಡ್ಕರ್. ಜಾತಿ ಅಸ್ಪೃಶ್ಯತೆಯ ಅನುಭವಗಳು : ಸಂವೇದನಾ ಆಯಾಮ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆ : ಕ್ರಿಯಾ ಸಾಧ್ಯತೆ  ವಿಷಯವಾಗಿ ವಿಶೇಷ ಉಪನ್ಯಾಸ.

ಮಹಾರಾಜ ಕಾಲೇಜು : ಮಹಾರಾಜ ಕಾಲೇಜಿನ ವಿದ್ಯಾರ್ಥಿನಿಲಯದ ವಾರ್ಷಿಕೋತ್ಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಏ.27ರ ಸಂಜೆ 5ಕ್ಕೆ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಲಾಗಿದೆ. ಸಂಸದ ಧ್ರುವನಾರಾಯಣ್ ಉದ್ಘಾಟಿಸುವರು, ಮೈ.ವಿ.ವಿಯ ವಿದ್ಯಾರ್ಥಿ ಕ್ಷೇಮಪಾಲನ ವಿಭಾಗದ ನಿರ್ದೇಶಕ ಪ್ರೊ.ಎಂ.ರುದ್ರಯ್ಯ ಅಧ್ಯಕ್ಷತೆ ವಹಿಸುವರು, ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚೆನ್ನಣ್ಣನವರ್ , ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಮಹಾಪೌರ ಪುರುಷೋತ್ತಮ್, ಪ್ರಾಂಶುಪಾಲೆ ಪ್ರೊ.ಸಿ.ಪಿ.ಸುನೀತಾ ಹಾಗೂ ಇತರರು ಉಪಸ್ಥಿತರಿರುವರು.

ಲಕ್ಷುರಿ ಟ್ಯಾಕ್ಸಿ ಸ್ಟ್ಯಾಂಡ್ ಮಾಲೀಕರು ಮತ್ತು ಚಾಲಕರ ಸಂಘ : ಮೈಸೂರಿನ ಲಕ್ಷುರಿ ಟ್ಯಾಕ್ಸಿ ಸ್ಟ್ಯಾಂಡ್ ಮಾಲೀಕರು ಮತ್ತು ಚಾಲಕರ ಸಂಘದಿಂದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ  ಜಯಂತಿಯನ್ನು ಏ.27ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರು-ನೀಲಗಿರಿ ರಸ್ತೆ, ಸಬ್ ಅರ್ಬನ್ ಬಸ್ ನಿಲ್ದಾಣದ ಮುಂಭಾಗ ಆಚರಿಸಲಾಗುತ್ತಿದೆ.

ಬಾಲಕರ ಬಾಲಮಂದಿರದಲ್ಲಿ : ಮೈಸೂರು ವಿವಿಯ ಸಮಾಜಶಾಸ್ತ್ರ ಅಧ್ಯಯನ ವಿಭಾಗದಿಂದ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆಯನ್ನು ಏ.27ರ ಬೆಳಿಗ್ಗೆ 11ಕ್ಕೆ ಆಯೋಜಿಸಲಾಗಿದೆ. ಅಧೀಕ್ಷಕ ಎಂ.ಕೆ.ಕುಮಾರಸ್ವಾಮಿ ಉದ್ಘಾಟನೆ ಮಾಡಲಿದ್ದಾರೆ. ವಿಭಾಗದ ಮುಖ್ಯಸ್ಥೆ ಡಾ.ಎಸ್.ಯಶೋಧ ಅಧ್ಯಕ್ಷತೆ ವಹಿಸುವರು.

Leave a Reply

comments

Related Articles

error: