ಮೈಸೂರು

ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಪಾಲಿಸದೇ ನಿಯಮ ಉಲ್ಲಂಘನೆ : 709 ಪ್ರಕರಣಗಳ ದಾಖಲು; ದಂಡ ಸಂಗ್ರಹ

ಮೈಸೂರು,ಜೂ.29:- ಕೋವಿಡ್-19 ಹರಡುವಿಕೆಯ 2ನೇ ಅಲೆಯ ಹಿನ್ನಲೆಯಲ್ಲಿ ಸರ್ಕಾರವು ಕಟ್ಟು ನಿಟ್ಟಿನ ನಿಯಮ/ಮಾರ್ಗಸೂಚಿಗಳನ್ನು ಜಾರಿಗೆ ತಂದಿದ್ದು, ನಗರ ಪೊಲೀಸರಿಂದ ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ.
ಕೋವಿಡ್ -19 ನಿಯಂತ್ರಣದ ಸಂಬಂಧ ಸರ್ಕಾರದ ಪ್ರಮುಖ ನಿಯಮಗಳಾದ ಮಾಸ್ಕ್
ಧರಿಸುವಿಕೆ ಮತ್ತು ಸಾಮಾಜಿಕ ಅಂತರ ನಿರ್ವಹಣೆಗಳ ಉಲ್ಲಂಘನೆ ಸಂಬಂಧ ಮೈಸೂರು ನಗರ ಪೊಲೀಸರು ಇಂದು ವಿಶೇಷ ಕಾರ್ಯಚರಣೆ ನಡೆಸಿ ಉಲ್ಲಂಘನೆಗಳ ಸಂಬಂಧ 709 ಪ್ರಕರಣಗಳನ್ನು ದಾಖಲಿಸಿ 1,33,150 ರೂಗಳ ಸ್ಥಳದಂಡವನ್ನು ವಿಧಿಸಿರುತ್ತಾರೆ.
ಈ ವಿಶೇಷ ಕಾರ್ಯಚರಣೆಯು ಇದೇ ರೀತಿ ಮುಂದುವರೆಯಲಿದ್ದು, ಸಾರ್ವಜನಿಕರು ಸರ್ಕಾರದ ಕೋವಿಡ್-19 ಪ್ರಮುಖ ನಿಯಮಗಳಾದ ಮಾಸ್ಕ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಹಾಗೂ ಸರ್ಕಾರದ ಇತರೆ ನಿಯಮ/ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ ಕೋವಿಡ್-19 ಹರಡುವಿಕೆ ನಿಯಂತ್ರಣದಲ್ಲಿ ನಗರದ ಪೊಲೀಸರಿಗೆ ಸಹಕಾರ ನೀಡಬೇಕೆಂದು ಪೊಲೀಸ್ ಆಯುಕ್ತರವರಾದ ಡಾ. ಚಂದ್ರಗುಪ್ತ ತಿಳಿಸಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: