ಕರ್ನಾಟಕಪ್ರಮುಖ ಸುದ್ದಿಮನರಂಜನೆ

ನಟ ಅರ್ಜುನ್ ಸರ್ಜಾ ನಿರ್ಮಿಸಿದ್ದಾರೆ ಆಂಜನೇಯ ದೇವಸ್ಥಾನ ; ಜು.1ಕ್ಕೆ ಉದ್ಘಾಟನೆ

ರಾಜ್ಯ(ಬೆಂಗಳೂರು)ಜೂ.29:-  ಬಹುಭಾಷಾ ನಟ ಅರ್ಜುನ್ ಸರ್ಜಾ   ಚೆನ್ನೈನಲ್ಲಿ ಆಂಜನೇಯ ದೇವಸ್ಥಾನ  ನಿರ್ಮಿಸಿದ್ದು, ಅವರ ಕನಸಿನ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮಕ್ಕೆ  ಮುಹೂರ್ತ ಫಿಕ್ಸ್ ಆಗಿದೆ.

ಚೆನ್ನೈನಲ್ಲಿ ದೇವಸ್ಥಾನ ನಿರ್ಮಿಸುವುದು ಅರ್ಜುನ್ ಸರ್ಜಾ ಅವರ ಅನೇಕ ವರ್ಷದ ಕನಸಾಗಿತ್ತು.  ಇದೀಗ ಕನಸು ನನಸಾಗುವ ಸಮಯ ಹತ್ತಿರ ಬಂದಿದ್ದು,   ದೇವಸ್ಥಾನದ ಕೆಲಸ ಸಂಪೂರ್ಣವಾಗಿದೆ.  ಉದ್ಘಾಟನೆಗೆ ಸಿದ್ಧವಾಗಿದ್ದು ಅದ್ದೂರಿಯಾಗಿ ಕುಂಭಾಭಿಷೇಕ ನಡೆಯಲಿದೆ.

ಈ ಬಗ್ಗೆ ನಟ ಅರ್ಜುನ್ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಬಹುದಿನಗಳ ಕನಸು ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯ ಸಂಪೂರ್ಣವಾಗಿದೆ ಎಂದಿದ್ದಾರೆ. ಜುಲೈ 1 ಮತ್ತು 2ರಂದು ಉದ್ಘಾಟನೆ ಕಾರ್ಯ ಇಟ್ಟುಕೊಂಡಿರುವುದಾಗಿ   ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ನಟ ಅರ್ಜುನ್ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು,  ಬಹುದಿನಗಳ ಕನಸು ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯ ಸಂಪೂರ್ಣವಾಗಿದೆ. ಜುಲೈ 1 ಮತ್ತು 2ರಂದು ಉದ್ಘಾಟನೆ ಕಾರ್ಯ ಇಟ್ಟುಕೊಂಡಿರುವುದಾಗಿ  ತಿಳಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: