ಕರ್ನಾಟಕಪ್ರಮುಖ ಸುದ್ದಿಮೈಸೂರು

ರಾಜ್ಯ ದಲ್ಲಿ ವ್ಯಾಕ್ಸಿನ್ ಕೊರತೆಯೇ ಇಲ್ಲ : ಸಚಿವ ಡಾ.ಕೆ.ಸುಧಾಕರ್

ಮೈಸೂರು, ಜೂ.29:-  ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆಯೇ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಅವರು ದಿನಕ್ಕೆ ಈಗಲೂ ಎರಡ್ಮೂರು ಲಕ್ಷ ವಾಕ್ಸಿನ್ ಕೊಡುತ್ತಿದ್ದೇವೆ. ಈಗಲು ನಮ್ಮ ಬಳಿ ಐದು ಲಕ್ಷ ವಾಕ್ಸಿನ್ ದಾಸ್ತಾನು ಇದೆ. ರಾಜ್ಯದಲ್ಲಿ ಡ್ರೈ ಎನ್ನುವ ಪರಿಸ್ಥಿತಿಯೇ ಬಂದಿಲ್ಲ. ಕೇಂದ್ರದವರ ಜೊತೆ ನಾವು ಮಾತನಾಡಿದ್ದೇವೆ. ನಾಳೆ ಮತ್ತಷ್ಟು ವಾಕ್ಸಿನ್ ರಾಜ್ಯಕ್ಕೆ ಬರಲಿದೆ. ದೇಶದಲ್ಲೇ ಅತೀ ಹೆಚ್ಚು ವಾಕ್ಸಿನ್ ಕೊಟ್ಟ ರಾಜ್ಯ ನಮ್ಮದು ಎಂದರು.

ರಾಜ್ಯದಲ್ಲಿ ಒಟ್ಟು ನಗರ ಪ್ರದೇಶದಲ್ಲಿ 20 ಕೊರೊನಾ ಹಾಟ್ ಸ್ಪಾಟ್ ಗುರುತಿಸಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ 20 ಕೊರೊನಾ ಹಾಟ್‌ಸ್ಪಾಟ್. ಮೈಸೂರಿನಲ್ಲಿ ಒಟ್ಟು 5 ಕೊರೊನಾ ಹಾಟ್ ಸ್ಪಾಟ್ ಇದೆ. ಪಿರಿಯಾಪಟ್ಟಣ, ಬನ್ನೂರು, ಹನಗೋಡು, ಸೀಹಳ್ಳಿ ಹಾಗೂ ಆಸ್ಪತ್ರೆ ಕಾವಲು ಹಾಟ್ ಸ್ಪಾಟ್ ಆಗಿದೆ. ಇದನ್ನ ಕಂಟೋನ್ಮೆಂಟ್ ಜೋನ್ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ಲ್ಯಾಬ್ ಆರಂಭಕ್ಕೆ ಸಿದ್ದತೆ ಮಾಡುತ್ತಿದ್ದೇವೆ  ಸಚಿವರು ತಿಳಿಸಿದರು.

ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಮುಖ್ಯಮಂತ್ರಿಯೇ ಹೇಳಿದ ಮೇಲೆ ಇದರಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಏನಿಲ್ಲ ಎಂದು ಹೇಳುವ ಮೂಲಕ ಮಾಧ್ಯಮದವರ ಪ್ರಶ್ನೆಗೆ ವಿವರಣೆ ನೀಡಲು  ನಿರಾಕರಿಸಿದರು. (ಕೆ,ಎಸ್,ಎಸ್.ಎಚ್)

Leave a Reply

comments

Related Articles

error: