ದೇಶಪ್ರಮುಖ ಸುದ್ದಿ

ಹೂಗ್ಲಿ ನದಿಯಲ್ಲಿ ದೋಣಿಗೆ ಹತ್ತುವ ಕಟ್ಟು ಕುಸಿದು ಮೂವರು ಸಾವು ; ಮೂವತ್ತು ಮಂದಿ ನಾಪತ್ತೆ

ಹೂಗ್ಲಿ : ಪಶ್ಚಿಮ ಬಂಗಾಳದ ಹೂಗ್ಲಿ ನದಿಯಲ್ಲಿ ಹಡಗಿಗೆ ಹತ್ತಿಳಿಯಲು ನಿರ್ಮಿಸಿದ ದಂಡೆ ಕುಸಿದ ಪರಿಣಾಮ ಮೂವರು ಮೃತಪಟ್ಟು ಹಲವಾರು ಮಂದಿ ಮೃತಪಟ್ಟ ಘಟನೆ ಇಂದು ನಡೆದಿದೆ.

ನದಿಯಲ್ಲಿ ಇದ್ದಕ್ಕಿದ್ದಂತೆ ಕಂಡುಬಂದ ರಕ್ಕಸ ಅಲೆಗಳೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಹೂಗ್ಲಿ ನದಿಯ ಗಾಗಾ ಘಾಟ್​​ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸ್ಥಳಕ್ಕೆ ರಕ್ಷಣಾ ತಂಡ ಆಗಮಿಸಿ ನದಿಯಲ್ಲಿ ಮುಳುಗಿದವರನ್ನು ಮೇಲೆತ್ತಲು ಕಾರ್ಯಾರಚಣೆ ಕೈಗೊಂಡಿದೆ.

ಹೂಗ್ಲಿ ನದಿಯಲ್ಲಿ ಮುಳುಗುತ್ತಿರುವ ಜನ ಮತ್ತು ರಕ್ಷಣೆಗೆ ಧಾವಿಸಿರುವ ದೋಣಿಗಳನ್ನು ಚಿತ್ರದಲ್ಲಿ ಕಾಣಬಹುದು.

ಈಜು ಬರುವವರು ಈಜಿ ದಡ ಸೇರಿದ್ದಾರೆ. ಆದರೆ ಈಜು ಬರದವರು ಮುಳುಗಿ ಸಾವನ್ನಪ್ಪಿದ್ದಾರೆ. ಕೆಲವರಿಗೆ ಗಾಯಗಳಾಗಿದ್ದು, 20 ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 30ಕ್ಕೂ ಹೆಚು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ ತಲಾ ಮೂರು ಲಕ್ಷ ರುಪಾಯಿ ಹಾಗೂ ಗಾಯಾಳುಗಳಿಗೆ ತಲಾ 25 ಸಾವಿರ ರುಪಾಯಿ ಪರಿಹಾರ ಘೋಷಿಸಿದೆ.

(ಎಸ್.ಎನ್/ಎನ್‍.ಬಿ.ಎನ್‍)

Leave a Reply

comments

Related Articles

error: