ಮೈಸೂರು

ಮೈಸೂರು ಜಿಲ್ಲಾ ಪೆಂಡಾಲ್ ಮಾಲೀಕರ ಸಂಘದ ವತಿಯಿಂದ ದಿನಸಿಕಿಟ್ ವಿತರಣೆ

ಮೈಸೂರು,ಜೂ.29:- ಮೈಸೂರಿನ ಉದಯಗಿರಿಯಲ್ಲಿರುವ ಸಫಾ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಉದಯಗಿರಿ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪಿ ನಟರಾಜ್ ಅವರು ಚಾಲನೆ ನೀಡಿದರು.

ನಂತರ ನಟರಾಜ್ ಅವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸುಮಾರು 150 ಮಂದಿ ಪೆಂಡಲ್ ಕಾರ್ಮಿಕರಿಗೆ   ಮೈಸೂರು ಜಿಲ್ಲಾ ಪೆಂಡಲ್ ಮಾಲೀಕರ ಸಂಘದ ಪದಾಧಿಕಾರಿಗಳು ದಿನಸಿ ಕಿಟ್ ನೀಡಿದರು. ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಪೆಂಡಲ್ ಮಾಲೀಕರು ಮತ್ತು ಕಾರ್ಮಿಕರಿಗೆ ಸರ್ಕಾರ ನೆರವಾಗುವಂತೆ ಮನವಿ ಮಾಡಿದರು,

ದಿನಸಿಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಲಿಂಗಪ್ಪ, ತಾಜ್ ಮಹಮ್ಮದ್, ಸಹ ಕಾರ್ಯದರ್ಶಿ ವಸೀಮ್, ಜಿಲ್ಲಾ ಸಂಚಾಲಕ‌ ಮನ್ಸೂರ್, ಡೈರೆಕ್ಟರ್ ವಾಸೀಮ್, ಜಹೀರ್ ಮತ್ತು ಖಜಾಂಚಿ ನಾಗರಾಜ್ ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: