ಕರ್ನಾಟಕಪ್ರಮುಖ ಸುದ್ದಿಮೈಸೂರು

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯ; ಪದೇ ಪದೇ ಚರ್ಚೆಗಳು ಬೇಡ ; ಬಿ.ವೈ.ವಿಜಯೇಂದ್ರ

ಮೈಸೂರು,ಜೂ.30 :- ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯ, ವರಿಷ್ಠರು ಇದನ್ನು ಸ್ಪಷ್ಟಪಡಿಸಿದ್ದಾರೆ. ಮತ್ತೆ ಪದೇ ಪದೇ ಈ ಕುರಿತು ಚರ್ಚೆಗಳು ಬೇಡ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಯಾರಾದರೂ ದೆಹಲಿಗೆ ಹೋಗಿದ್ದರೆ ಅದು ಅವರ ವೈಯುಕ್ತಿಕ ವಿಚಾರ. ದೆಹಲಿಗೆ ಹೋದ ಕೂಡಲೇ ರಾಜಕೀಯ ಬಣ್ಣ ಬಿಚ್ಚಿಡುವುದು ಬೇಡ. ಇನ್ನೆರಡು ವರ್ಷ ಯಡಿಯೂರಪ್ಪನವರೇ ರಾಜ್ಯದ ಮುಖ್ಯಮಂತ್ರಿಗಳಾಗಿ ಮುಂದುವರಿಯಲಿದ್ದಾರೆ ಎಂದರು.

ಇಡೀ ದೇಶದಲ್ಲೇ ಪ್ರಸಿದ್ಧಿ ಹೊಂದಿರುವ ಮೈಸೂರು ಮೃಗಾಲಯದಲ್ಲಿ ಕೋವಿಡ್ ಇರತಕ್ಕಂತಹ ಸಂದರ್ಭದಲ್ಲಿ ಇಲ್ಲಿರುವ ಕಾರ್ಮಿಕ ಬಂಧುಗಳಿಗೆ ಮೃಗಾಲಯದ  ಅಧ್ಯಕ್ಷರಾಗಿರುವ ಮಹದೇವ ಅವರು ಅವರ ನೇತೃತ್ವದಲ್ಲಿ ಮೈಸೇವಾ ಫೌಂಡೇಶನ್ ವತಿಯಿಂದ ಎಲ್ಲಾ ಕಾರ್ಮಿಕರಿಗೆ ದಿನಸಿ ಕಿಟ್ ಕೊಡುವಂತಹ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಆ ಕಾರ್ಯದ ನಿಮಿತ್ತ ಮೈಸೂರಿಗೆ ಇಂದು ಭೇಟಿ ನೀಡಿರುವುದಾಗಿ ತಿಳಿಸಿದರು.

ಬಿಜೆಪಿ ಕೆಲವು ನಾಯಕ ದೆಹಲಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾರು ದೆಹಲಿಗೆ ಹೋಗಬಾರದಂತೆನೂ ನಿರ್ಬಂಧವನ್ನು ಹೇರಿಲ್ಲ, ಅವರದ್ದೇ ಆದಂತಹ ಕೆಲಸದ ಮೇಲೆ ಹೋಗಿರುತ್ತಾರೆ. ಎಲ್ಲದಕ್ಕೂ ರಾಜಕೀಯ ಬಣ್ಣ ಕೊಡತಕ್ಕಂತದ್ದು ಸರಿಯಲ್ಲ ಎಂದರು. ಯೋಗೇಶ್ವರ್ ಅವರು ಎಕ್ಸಾಂ ಬರೆದಾಗಿದೆ. ರಿಸಲ್ಟ್ ಗೆ ವೇಟ್ ಮಾಡುತ್ತಿದ್ದೇವೆ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ  ಈ ಸಂದರ್ಭದಲ್ಲಿ ನಮ್ಮ ರಾಷ್ಟ್ರೀಯ ನಾಯಕರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಕರ್ನಾಟಕದ ಉಸ್ತುವಾರಿಗಳಾಗಿರುವ ಅರುಣ್ ಸಿಂಗ್ ಅವರು ಬಹಳ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಯಡಿಯೂರಪ್ಪನವರು ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ಒಂದು ಅವಧಿಯನ್ನು ಸಂಪೂರ್ಣಗೊಳಿಸುತ್ತಾರೆಂಬ ಮಾತನ್ನು ಹೇಳಿದ್ದಾರೆ. ಹಾಗಾಗಿ ಇದರ ಬಗ್ಗೆ ಪದೇ ಪದೇ ಚರ್ಚೆ ಮಾಡತಕ್ಕಂತಹ ಅವಶ್ಯಕತೆ ಇಲ್ಲ. ರಾಷ್ಟ್ರೀಯ ನಾಯಕರುಗಳೂ ಹೇಳಿದ್ದಾರೆ. ರಾಜ್ಯಾಧ್ಯಕ್ಷರೂ ಹೇಳಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೂ ಹೇಳಿದ್ದಾರೆ. ಇನ್ನೆರಡು ವರ್ಷಗಳ ಕಾಲ ನಾನು ಮುಖ್ಯಮಂತ್ರಿಯಾಗಿ  ಒಳ್ಳೆಯ ಆಡಳಿತ ಕೊಡುತ್ತೇನೆ ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

ರಾಷ್ಟ್ರೀಯ ನಾಯಕರುಗಳು ಬಹಳ ಸ್ಪಷ್ಟ ಮಾತುಗಳಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಸರ್ಕಾರ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಅವರ ನೇತೃತ್ವದಲ್ಲಿಯೇ ಈ ಅವಧಿಯನ್ನು ಮುಗಿಸಲಿದ್ದಾರೆಂದು ಹೇಳಿದರು.  ಮೈಸೂರಿಗೆ ಬಂದ ಸಂದರ್ಭದಲ್ಲಿ ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಭೇಟಿ ಮಾಡಲು ತೆರಳುತ್ತಿದ್ದೇನೆ ಎಂದು ತಿಳಿಸಿದರು.

ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ವಿಫಲ, ಆಡಳಿತ ನಡೆಸುವಲ್ಲಿಯೂ ವಿಫಲವೆಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ ಕಳೆದ ಎಂಟತ್ತು ದಿನಗಳಿಂದ ಕಾಂಗ್ರೆಸ್ ನಲ್ಲಿ ಯಾವ ರೀತಿಯ ವಿದ್ಯಮಾನವಿದೆ ಎಂಬುದು ತಮಗೆಲ್ಲರಿಗೂ ತಿಳಿದೇ ಇದೆ. ವಿರೋಧ ಪಕ್ಷದಲ್ಲಿರತಕ್ಕ ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತವನ್ನು ಚುಕ್ಕಾಣಿ ಹಿಡಿಯಬೇಕು. ಸಿಎಂ ಅಭ್ಯರ್ಥಿ ಚರ್ಚೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದರು.

Leave a Reply

comments

Related Articles

error: