ದೇಶಪ್ರಮುಖ ಸುದ್ದಿ

ದೆಹಲಿ ಗೆಲುವಿಗೆ ಮೋದಿ ಧನ್ಯವಾದ ; ಮತಯಂತ್ರ ದುರ್ಬಳಕೆಯಾಗಿದೆ ಎಂದು ಮತ್ತೆ ಆಪ್ ಆರೋಪ

ನವದೆಹಲಿ : ದೆಹಲಿಯ ಮೂರು ಮಹಾನಗರ ಪಾಲಿಕೆಗಳಲ್ಲೂ ಸ್ಪಷ್ಟ ಬಹುಮತ ಗಳಿಸಲು ಕಾರಣವಾದ ದೆಹಲಿ ಜನತೆಗೆ ಪ್ರಧಾನಿ ನರೇಂದ್ರ ಮೋದಿಯವರು ಧನ್ಯವಾದ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದು, ಬಿಜೆಪಿಯ ಕಠಿಣ ಪರಿಶ್ರಮಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೆಹಲಿ ಬಿಜೆಪಿಯ ಪರಿಶ್ರಮದಿಂದ ಈ ಗೆಲುವು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

ದೆಹಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಮೂರನೇ ಬಾರಿಗೆ ಅಧಿಕಾರ ಹಿಡಿದಿದೆ.

ಪಕ್ಷಗಳು ಗಳಿಸಿರುವ ಸ್ಥಾನಗಳ ಪಟ್ಟಿ ಹೀಗಿದೆ :

ಪಕ್ಷ/ಪಾಲಿಕೆ

ದೆಹಲಿ ಪೂರ್ವ

ದೆಹಲಿ ಉತ್ತರ

ದೆಹಲಿ ದಕ್ಷಿಣ

ಒಟ್ಟಾರೆ

ಬಿಜೆಪಿ

48

66

70

184

ಆಪ್

10

22

16

46

ಕಾಂಗ್ರೆಸ್

3

15

12

30

ಇತರೆ

2

2

6

10

ಇವಿಎಂ ದುರ್ಬಳಕೆ ಮಾಡಲಾಗಿದೆ ಎಂದ ಆಪ್ :

ಪ್ರತಿಷ್ಠೆಯ ಚುನಾವಣೆಯಾಗಿದ್ದ ದೆಹಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿರುವ ಕುರಿತು ಆಪ್ ಆಕ್ಷೇಪಿಸಿದೆ. ಇವಿಎಂ – ವಿದ್ಯುನ್ಮಾನ ಮತಯಂತ್ರಗಳನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಆಮ್ ಆದ್ಮಿ ಪಕ್ಷ ಮತ್ತೆ ಕ್ಯಾತೆ ತೆಗೆದಿದೆ.

ಫಲಿತಾಂಶದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಆಪ್ ನಾಯಕ ಹಾಗೂ ದೆಹಲಿ ಸಚಿವ ಗೋಪಾಲ್ ರಾಯ್ ಅವರು, ಬಿಜೆಪಿ ಗೆಲವು ಸಾಧಿಸಿರುವುದು ದೊಡ್ಡ ಸಾಧನೆಯೇನಲ್ಲ. ಇವಿಎಂ ದುರ್ಬಳಕೆ ಮಾಡಿಕೊಂಡು ಸಾಧಿಸಿದೆ ಎಂದು ಹೇಳಿದ್ದಾರೆ.

“ಕಳೆದ 6 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲದ ಬಿಜೆಪಿ ಹೇಗೆ ಗೆಲುವು ಸಾಧಿಸಿತು?” ಎಂದು ಪ್ರಶ್ನಿಸುವ ಜೊತೆಗೆ “ಮತಯಂತ್ರ ದುರ್ಬಳಕೆಯಿಂದ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿದೆ” ಎಂದು ಆಪ್ ತನ್ನದೇ ಹಳೇ ವಾದವನ್ನು ಮತ್ತೆ ಮತ್ತೆ ಮಂಡಿಸುತ್ತಿದೆ.

(ಎನ್.ಬಿ.ಎನ್)

Leave a Reply

comments

Related Articles

error: