ಸುದ್ದಿ ಸಂಕ್ಷಿಪ್ತ

ಮಧುರ ಜ್ಯೋತಿ ಕಲಾ ಸಂಘದ ವಾರ್ಷಿಕೋತ್ಸವ :ಏ.28

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಧುರ ಜ್ಯೋತಿ ಕಲಾ ಸಂಘದ 6ನೇ ವಾರ್ಷಿಕೋತ್ಸವ ಹಾಗೂ ವಿಶೇಷ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಏ.28ರ ಸಂಜೆ 5.30ಕ್ಕೆ ಜೆ.ಎಲ್.ಬಿ.ರಸ್ತೆಯ ‘ನಾದಬ್ರಹ್ಮ’ ದಲ್ಲಿ ಾಯೋಜಿಸಲಾಗಿದೆ. ಸಮಾಜ ಸೇವಕ ಕೆ,ರಘುರಾಂ ವಾಜಪೇಯಿ ಅಧ್ಯಕ್ಷತೆ ವಹಿಸುವರು, ವಿಜಯಧ್ವನಿ ಪ್ರತಿಷ್ಠಾನ ಟ್ರಸ್ಟ್ ನ ಆರ್.ಸಿ.ರಾಜಲಕ್ಷ್ಮಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ, ಬಿಜೆಪಿಯ ವರಕೂಡು ಪ್ರಕಾಶ್, ಎ.ಎಂ.ಸಿ.ದಾಕ್ಷಾಯಣಿ, ಎಸ್.ನಾಗರತ್ನ ಭಾಗವಹಿಸುವರು, ಖ್ಯಾತ ನಿರೂಪಕ ಮೈಕ್ ಚಂದ್ರು, ಆರ್.ಸಿ.ರಾಜಲಕ್ಷ್ಮಿ, ಎಂ.ಸಿ.ಜಗದೀಶ್ ಇವರುಗಳನ್ನು ಸನ್ಮಾನಿಸಲಾಗುವುದು. ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು.

Leave a Reply

comments

Related Articles

error: