ಕ್ರೀಡೆದೇಶಪ್ರಮುಖ ಸುದ್ದಿ

ಅರ್ಜುನ ಪ್ರಶಸ್ತಿಗೆ ಏರ್ ರೈಫಲ್ ಶೂಟರ್ ಎಲವೆನಿಲ್ ವಲರಿವನ್ ಹೆಸರು ಶಿಫಾರಸು

ಕ್ರಿಕೆಟ್ ದಂತಕಥೆ ಮಿಥಾಲಿ ರಾಜ್ ಹೆಸರು ರಾಹುಲ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಶಿಫಾರಸಿಗೆ ನಿರ್ಧಾರ

ದೇಶ(ನವದೆಹಲಿ)ಜು.1:-    ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ​​ಆಫ್ ಇಂಡಿಯಾ ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗೆ ಕ್ರೀಡಾಪಟುಗಳ ಹೆಸರನ್ನು ಶಿಫಾರಸು ಮಾಡಿದೆ.

ಈ ವರ್ಷ ನಡೆಯಲಿರುವ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಲ್ಲಿ ಅರ್ಜುನ ಪ್ರಶಸ್ತಿಗೆ 10 ಮೀ ಏರ್ ರೈಫಲ್ ಶೂಟರ್ ಎಲವೆನಿಲ್ ವಲರಿವನ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. ಅದೇ ವೇಳೆ 10 ಮೀ ಏರ್ ಪಿಸ್ತೂಲ್ ಶೂಟರ್ ಅಭಿಷೇಕ್ ವರ್ಮಾ ಮತ್ತು 50 ಮೀ ಪಿಸ್ತೂಲ್ ವಿಶ್ವ ಚಾಂಪಿಯನ್ ಓಂ ಪ್ರಕಾಶ್ ಮಿಥರ್ವಾಲ್ ಅವರ ಹೆಸರುಗಳನ್ನೂ  ಶಿಫಾರಸು ಮಾಡಿ ಕಳುಹಿಸಲಾಗಿದೆ.

ಡಬಲ್ ಟ್ರ್ಯಾಪ್ ಶೂಟಿಂಗ್‌ ನಲ್ಲಿ ವಿಶ್ವ ಚಾಂಪಿಯನ್ ಅಂಕುರ್ ಮಿತ್ತಲ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಅಂಜುಮ್ ಮೌಡ್‌ ಗಿಲ್ ಅವರ ಹೆಸರನ್ನು ಕಳುಹಿಸಲಾಗಿದೆ. ಈ ಹೆಸರುಗಳನ್ನು ದೇಶದ ಅತ್ಯುನ್ನತ ಕ್ರೀಡಾ ಗೌರವ, ಅಂದರೆ ಖೇಲ್ ರತ್ನ ಪ್ರಶಸ್ತಿಗಾಗಿ ಶಿಫಾರಸು ಮಾಡಲಾಗಿದೆ. ಆದರೆ  ಈ ಬಾರಿ ಯಾವುದೇ ತರಬೇತುದಾರರ ಹೆಸರನ್ನು ಶೂಟಿಂಗ್ ಅಸೋಸಿಯೇಷನ್ ​​ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಿಲ್ಲ.

ಇದಲ್ಲದೆ, ಭಾರತೀಯ ಕ್ರಿಕೆಟ್ ದಂತಕಥೆ ಮಿಥಾಲಿ ರಾಜ್ ಅವರ ಹೆಸರನ್ನು ದೇಶದ ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಶಿಫಾರಸು ಮಾಡಲು ಭಾರತೀಯ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಮಿಥಾಲಿ ರಾಜ್ ಅವರಲ್ಲದೆ, ಭಾರತದ ನಂಬರ್ ಒನ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಹೆಸರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಕಳುಹಿಸಲಾಗುತ್ತಿದೆ. ಅರ್ಜುನ ಪ್ರಶಸ್ತಿಗಾಗಿ ಮೂವರು ಆಟಗಾರರ ಹೆಸರನ್ನು ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ.

ಮಂಡಳಿಯು ಹಿರಿಯ ಬ್ಯಾಟ್ಸ್‌ಮನ್ ಶಿಖರ್ ಧವನ್, ಕೆ.ಎಲ್.ರಾಹುಲ್ ಮತ್ತು ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಕಳುಹಿಸಲಿದೆ ಎನ್ನಲಾಗಿದೆ. ಆದರೆ, ಯಾವುದೇ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಕಳುಹಿಸಲಾಗಿಲ್ಲ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: