ಕರ್ನಾಟಕಪ್ರಮುಖ ಸುದ್ದಿಮೈಸೂರು

ಸಿಎಂ ಅಭ್ಯರ್ಥಿ ಕುರಿತಂತೆ ಕಾಂಗ್ರೆಸ್ ನಲ್ಲಿ ಇವತ್ತಿನವರೆಗೆ ಯಾವುದೇ ಚರ್ಚೆ ಇಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಮೈಸೂರು,ಜು.1:- ಸಿಎಂ ಅಭ್ಯರ್ಥಿ ಕುರಿತಂತೆ ಕಾಂಗ್ರೆಸ್ ನಲ್ಲಿ ಇವತ್ತಿನವರೆಗೆ ಯಾವುದೇ ಚರ್ಚೆ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಮೈಸೂರಿನ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯನವರಿಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ  ಇನ್ನೂ ಒಂದು ವರ್ಷದ ಹತ್ತು ತಿಂಗಳಿದೆ ಚುನಾವಣೆಗೆ, ಚುನಾವಣೆ ನಡೆಯಬೇಕು. ಹೊಸ ಶಾಸಕರು ಬರಬೇಕು. ಹೊಸ ಶಾಸಕರು ಯಾರು ನಾಯಕರಾಗಬೇಕೆಂಬುದರ ಕುರಿತು ಅವರ ಅಭಿಪ್ರಾಯ ವ್ಯಕ್ತಪಡಿಸಬೇಕು.   ಅದರ ನಂತರ ಪಕ್ಷದ ಹೈಕಮಾಂಡ್ ಯಾರು ಲೀಡರ್ ಆಗಬೇಕು ಅನ್ನೋದನ್ನು ತೀರ್ಮಾನ ಮಾಡಲಿದೆ. ಈಗ ಯಾಕೆ ಚರ್ಚೆ ಅದು ಎಂದು ಪ್ರಶ್ನಿಸಿದರು.

ಕೆಪಿಸಿಸಿ ಅಧ್ಯಕ್ಷರು ಮೂಲ, ವಲಸಿಗ ಅಂತ ಪ್ರಸ್ತಾಪ ಮಾಡುತ್ತಾರಲ್ಲ ಎಂದಿದ್ದಕ್ಕೆ ಪ್ರತಿಕ್ರಿಯಿಸಿ, ಇಲ್ಲ   ಇಲ್ಲಿ ಮೂಲನು ಇಲ್ಲ, ವಲಸೆನೂ ಇಲ್ಲ, ನಮ್ಮ ಇಬ್ರಾಹಿಂ ಒಂದು ಕಥೆ ಹೇಳಿದ್ನಲ್ಲ ಗೊತ್ತಿಲ್ವ, ಮನೆಗೆ ಬರೋ ಸೊಸೆ ಹೊಸಬರೆ, ನಂತರ ಅವರ ಹತ್ರನೇ ಕೀ ಕೊಡುತ್ತೇವಲ್ಲ ಅಂತ ಹಾಸ್ಯ ಚಟಾಕಿ ಹಾರಿಸಿದರು.  ಈಗ ನಾನು ಹೊರಗಡೆಯಿಂದ ಬಂದವನು ನಾನು ಮುಖ್ಯಮಂತ್ರಿ ಆಗಿಲ್ವ? ಮತ್ತೆ ವಲಸಿಗ , ಕಾಂಗ್ರೆಸ್ ಮೂಲ ಅಂತ ಎಲ್ಲಿಂದ ಬರತ್ತಪ್ಪ ಅಂತ ಮಾಧ್ಯಮದವರನ್ನೇ ಪ್ರಶ್ನಿಸಿ, ಅದೆಲ್ಲ ಬರಲ್ಲ ನಡೆಯಿರಿ ಎಂದರು.

ಈ ಸಂದರ್ಭ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮರೀಗೌಡ ಮತ್ತಿತರರು ಮಾಜಿ ಸಿಎಂ ಜೊತೆಗಿದ್ದರು.

Leave a Reply

comments

Related Articles

error: