ಮೈಸೂರು

ಮೊದಲ ಪತ್ನಿ ಗರ್ಭಿಣಿಯಾಗಿರುವಾಗ ಇನ್ನೊಂದು ಮದುವೆಯಾದ ಭೂಪ

ಪ್ರೀತಿಸಿ ಕೈಹಿಡಿದವಳನ್ನು ಮರೆತು ಆಕೆ ಐದು ತಿಂಗಳ ಗರ್ಭಿಣಿಯಾಗಿರುವಾಗಲೇ ಮಹಾಶಯನೊಬ್ಬ ಮತ್ತೋರ್ವಳಿಗೆ ತಾಳಿ ಕಟ್ಟಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಕುವೆಂಪುನಗರದ ಎಂ ಬ್ಲಾಕ್ ನಿವಾಸಿ, ಖಾಸಗಿ ಬ್ಯಾಂಕೊಂದರ ಉದ್ಯೋಗಿ ಬಸವರಾಜು ಎಂಬವರೇ ಮತ್ತೋರ್ವಳಿಗೆ ತಾಳಿಕಟ್ಟಿದ ಭೂಪನಾಗಿದ್ದಾನೆ. ಐದು ವರ್ಷಗಳಿಂದ ಪ್ರೀತಿಸಿದ್ದ ಜಯಲಕ್ಷ್ಮಿಪುರಂನ ರೂಪಾ ಎಂಬವಳನ್ನು ಕಳೆದ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ. ಮದುವೆಗೆ ಮನೆಯವರ ವಿರೋಧವಿತ್ತು. ಎನ್ನಲಾಗಿದೆ. ಇದೀಗ ಸೌಮ್ಯಾ ಎಂಬ ಯುವತಿಯನ್ನು ವರಿಸಿದ್ದಾನೆ ಎನ್ನಲಾಗುತ್ತಿದೆ. ಆತನ ಮನೆಯ ಮುಂದೆ ವಿವಾಹಿತ ಮಹಿಳೆಯ ಮನೆಯವರು ಆಗಮಿಸಿ ತಕರಾರು ತೆಗೆದಿದ್ದಾರೆ. ಇದೀಗ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ ಎನ್ನಲಾಗುತ್ತಿದೆ. ನಾಳೆಯವರೆಗೂ ಆತನಿಗೆ ಗಡುವು ನೀಡಿದ್ದಾರೆ ಎಂದು ತಿಳಿದು ಬಂದಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: