ಮೈಸೂರು

ನಕ್ಸಲ್ ದಾಳಿಗೆ ಖಂಡನೆ : ಮೊಂಬತ್ತಿ ಬೆಳಗಿ ಶ್ರದ್ದಾಂಜಲಿ ಅರ್ಪಣೆ

 ಇಂದು ಯುವಭಾರತ್ ಸಂಘಟನೆಯ ವತಿಯಿಂದ ಮೈಸೂರಿನ ಚಾಮುಂಡಿ ಪುರಂ ವೃತ್ತದಲ್ಲಿ ನಕ್ಸಲ್  ಗುಂಡಿಗೆ ಬಲಿಯಾದ ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಂಘಟನೆಯ ಸಂಚಾಲಕ ಜೋಗಿಮಂಜು ಮಾತಾನಾಡಿ  ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಇಲ್ಲಿನ ಸುಕ್ಮಾ ಜಿಲ್ಲೆಯಲ್ಲಿ ಮಾವೋವಾದಿ ನಕ್ಸಲರ ಗುಂಡಿನ ದಾಳಿಗೆ 26 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ನಕ್ಸಲ್ ದಾಳಿಯನ್ನು ತೀವ್ರವಾಗಿ ಯುವಭಾರತ್ ಸಂಘಟನೆ ಖಂಡಿಸುತ್ತದೆ.ಇದೊಂದು ಹೇಡಿತನದ ಕೃತ್ಯ. ದಾಳಿಯಲ್ಲಿ ಗಾಯಗೊಂಡ ಯೋಧರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.

ಛತ್ತೀಸ್ ಡದ ನಕ್ಸಲ್ ಪೀಡಿತ ಬುರ್ಕಾಪಾಲ್- ಚಿಂತಗುಫ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು, 26 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಅಲ್ಲದೆ ಗಾಯಾಳುಗಳ ಪೈಕಿ ಏಳು ಮಂದಿ ಯೋಧರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.99 ಯೋಧರ ಸಿಆರ್‌ಪಿಎಫ್‌ ಪಡೆ ಮೇಲೆ 300 ನಕ್ಸಲರು ಹೊಂಚು ಹಾಕಿ ದಾಳಿ ನಡೆಸಿದ್ದು, ದಾಳಿಯ ಬಳಿಕ ಸಿಆರ್ ಪಿಎಫ್ ಯೋಧರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದಿರುವುದು ಖಂಡನಾರ್ಹ.ನಕ್ಸಲರ ದಾಳಿಯಲ್ಲಿ ಸಿಆರ್‌ಪಿಎಫ್‌ ಪಡೆಯ ಕಮಾಂಡರ್‌, ಇನ್ಸ್‌ಪೆಕ್ಟರ್‌ ದರ್ಜೆಯ ಅಧಿಕಾರಿ ರಘವೀರ್‌ ಸಿಂಗ್‌ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ ಇವರ ಆತ್ಮ ಕ್ಕೆ ಶಾಂತಿ ಸಿಗಲಿ ಎಂದರು.

ಈ ಸಂದರ್ಭದಲ್ಲಿ ಯುವಭಾರತ್ ಸಂಘಟನೆಯ ಸಂಚಾಲಕ ಜೋಗಿಮಂಜು,ನಗರಪಾಲಿಕೆ ಸದಸ್ಯರಾದ ಮಾ.ವಿ.ರಾಮಪ್ರಸಾದ್, ಕೆ.ಎಂ.ಪಿ.ಕೆ.ಚಾರಿಟಿ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್, ಜಯಕರ್ನಾಟಕ ಯುವ ಅಧ್ಯಕ್ಷ ಅಜಯ್ ಶಾಸ್ತ್ರಿ,ಅಪೂರ್ವ ಸುರೇಶ್ ಮೈ.ಲಾ.ವಿಜಯ ಕುಮಾರ್, ಸಂದೀಪ್, ಶ್ರೀಕಾಂತ್ ಕಶ್ಯಪ್,ನಿಶಾಂತ್, ಪ್ರವೀಣ್,ಅಭಿ.ಮತ್ತಿತರರು ಪಾಲ್ಗೊಂಡಿದ್ದರು.

Leave a Reply

comments

Related Articles

error: